Advertisement

KPCC ಕಾರ್ಯಾಧ್ಯಕ್ಷರಾಗಿ ಮಂಜುನಾಥ್‌ ಭಂಡಾರಿ

10:08 PM Mar 23, 2024 | Team Udayavani |

ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಧಾನ ಪರಿಷತ್‌ ಸದಸ್ಯ ಡಾ|ಮಂಜುನಾಥ್‌ ಭಂಡಾರಿ ಸಹಿತ ಐವರನ್ನು ಎಐಸಿಸಿ ನೇಮಕಗೊಳಿಸಿದೆ. ತನ್ವೀರ್‌ ಸೇಟ್‌, ಜಿ.ಸಿ.ಚಂದ್ರಶೇಖರ್‌, ವಿನಯ್‌ ಕುಲಕರ್ಣಿ, ವಸಂತ್‌ ಕುಮಾರ್‌ ಇತರ ಕಾರ್ಯಾಧ್ಯಕ್ಷರಾಗಿರುತ್ತಾರೆ.

Advertisement

ಮಂಜುನಾಥ ಭಂಡಾರಿ ಅವರು ಮೂಲತಃ ಎಂಜಿನಿಯರಿಂಗ್‌ ಹಿನ್ನೆಲೆಯಿಂದ ಬಂದಿರುವ ಶಿಕ್ಷಣೋದ್ಯಮಿಯಾಗಿದ್ದು ಪಂಚಾಯತ್‌ ರಾಜ್‌ ವಿಚಾರದಲ್ಲಿ ಆಳವಾದ ಅಧ್ಯಯನವನ್ನು ಮಾಡಿದವರು. ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಉತ್ಕೃಷ್ಟತೆಯ ಕೇಂದ್ರವಾಗಿಸಿದವರು. ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡವರಲ್ಲದೆ ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿಯನ್ನೂ ಪಡೆದಿದ್ದಾರೆ.

ಕಳೆದ ನಾಲ್ಕೂವರೆ ದಶಕಗಳಿಂದ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಉನ್ನತ ನಿರ್ಧಾರಕ ಶಕ್ತಿಯುಳ್ಳ ಎಐಸಿಸಿ ಕಮಿಟಿಯ ಭಾಗವೂ ಆಗಿದ್ದಾರೆ.

ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರಕಾರವಿದ್ದಾಗ ಭಂಡಾರಿ ಜಾರಿಗೊಂಡಿದ್ದ ಗ್ರಾಮೀಣ ಕಲ್ಯಾಣ ಯೋಜನೆಯಾದ ಸಾಮಾನ್ಯ ಸೇವಾ ಕೇಂದ್ರಗಳ(ರಾಜೀವ್‌ ವಿಕಾಸ್‌ ಕೇಂದ್ರ) ಸ್ಥಾಪನೆಯ ಹಿಂದಿರುವ ರೂವಾರಿಗಳಲ್ಲಿ ಭಂಡಾರಿ ಕೂಡಾ ಒಬ್ಬರು.

ಪ್ರಚಾರ ಸಮಿತಿಗೆ ನೇಮಕ
ಅಲ್ಲದೆ ಚುನಾವಣ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ವಿನಯ ಕುಮಾರ್‌ ಸೊರಕೆ, ಸಹ ಅಧ್ಯಕ್ಷರಾಗಿ ಡಾ| ಎಲ್‌. ಹನುಮಂತಯ್ಯ ಮತ್ತು ಉಪಾಧ್ಯಕ್ಷರಾಗಿ ರಿಜ್ವಾನ್‌ ಅರ್ಷದ್‌ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ನೇಮಕ ಮಾಡಿದ್ದಾರೆ.

Advertisement

ಕಾಂಗ್ರೆಸ್‌ ಪ್ರ.ಕಾರ್ಯದರ್ಶಿ ಆಗಿ ಕಿರಣ್‌ ನೇಮಕ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್‌ ಬುಡ್ಲೆಗುತ್ತು ಸುಳ್ಯ ಅವರನ್ನು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ನೇಮಕಗೊಳಿಸಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next