ಚಿತ್ರಕಲೆ, ಮನುಷ್ಯನ ಮನಸ್ಸಿನ ಅದ್ಭುತ ಸೃಷ್ಟಿಗಳಲ್ಲೊಂದು. ಕಂಡಿದ್ದನ್ನು, ಅನುಭವಿಸಿದ್ದನ್ನು, ಭಾವನೆಗಳನ್ನು ಬಣ್ಣದ ಮುಖಾಂತರ ವ್ಯಕ್ತಪಡಿಸುವುದು ಎಲ್ಲರಿಗೂ ಒಲಿಯುವುದಿಲ್ಲ. ಅಂಥ ದಿವ್ಯಕಲೆಯನ್ನು ಕರಗತ ಮಾಡಿಕೊಂಡ ಇಬ್ಬರು ಕಲಾವಿದರ “ಮಾಸ್ಟರ್ ಸ್ಟ್ರೋಕ್’ ಎಂಬ ಚಿತ್ರಕಲಾ ಪ್ರದರ್ಶನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿದೆ.
ಎಂ.ವೈ. ಮಂಜುಳಾ ಸಂಜೀವ್ ಹಾಗೂ ಕಲಾವಿದ ದೀಪಕ್ ಸುತಾರ್ ಈ ಮಾಸ್ಟರ್ ಸ್ಟ್ರೋಕ್‌ನ ಹಿಂದಿರುವ ಕಲಾಮನಸ್ಸುಗಳು. ಆಯಿಲ್ ಪೇಂಟಿಂಗ್, ಆಕ್ರಿಲಿಕ್, ಮಿಕ್ಸ್ ಮೀಡಿಯಾ, ಗ್ಲೋಯಿಂಗ್ ಡಾರ್ಕ್ ಪೇಂಟಿಂಗ್, ರಿಯಲಿಸ್ಟಿಕ್, ಅಬ್‌ಸ್ಟ್ರಾéಕ್ಟ್, ಕಾಂಟೆಂಪರರಿ ಚಿತ್ರಗಳನ್ನು ನೋಡಿ ಆನಂದಿಸಬಹುದು.
ಎಂಜಿನಿಯರ್‌ರ ಕಲಾಸಕ್ತಿ: ಕೆಪಿಟಿಸಿ ಅಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿರುವ ಮಂಜುಳಾ ಅವರಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ. ಮೂಲತಃ ಮೈಸೂರಿನ ಅವರು, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಯಾವುದೇ ಕ್ಲಾಸ್‌ಗೆ ಹೋಗದೆಯೇ ಸ್ವಂತವಾಗಿ ಚಿತ್ರಕಲೆ ಕಲಿತು, ಮೈಸೂರು ದಸರಾದಲ್ಲಿ ಬೆಸ್ಟ್ ಪೇಂಟಿಂಗ್ ಅವಾರ್ಡ್ ಕೂಡ ಪಡೆದಿದ್ದಾರೆ.
ಕಲೆಯೇ ಜೀವನ: ಮೂಲತಃ ಚಿಕ್ಕೋಡಿಯವರಾದ ದೀಪಕ್ ಸತೂರ್ ಅವರು, ಚಿತ್ರಕಲೆಯಲ್ಲಿ ಪದವಿ ಪಡೆದಿದ್ದಾರೆ. ರಾಜಕೀಯ ವಿಡಂಬನೆಯ ಕಾಟೂìನ್‌ಗಳು, ಕ್ಯಾರಿಕೇಚರ್, ಆಯಿಲ್ ಆ್ಯಂಡ್ ಆ್ಯಕ್ರಿಲಿಕ್, ನೈಫ್ ಪೇಂಟಿಂಗ್ ಮೂಲಕ ಜನಪ್ರಿಯರು.
ಎಲ್ಲಿ?: ಗ್ಯಾಲರಿ 2, ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ
ಯಾವಾಗ?: ಮೇ 26, 27 ಬೆ.11-7