Advertisement

ವಿಶ್ವ ಕಿರಿಯರ ಕುಸ್ತಿ: ಮಂಜು ಕುಮಾರಿಗೆ ಕಂಚು

06:30 AM Aug 05, 2017 | Team Udayavani |

ಹೊಸದಿಲ್ಲಿ: ವಿಶ್ವ ಕಿರಿಯರ ಕುಸ್ತಿ ಕೂಟದಲ್ಲಿ ಭಾರತದ ಮಂಜು ಕುಮಾರಿ ಕಂಚಿನ ಪದಕ ಗೆದ್ದಿದ್ದಾರೆ. ಇವರು 59 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ 2-0 ಅಂತರದಿಂದ ಉಕ್ರೈನಿನ ಇಲೋನಾ ಪ್ರೊಕೊಪೆವಿನುಕ್‌ ಅವರನ್ನು ಸೋಲಿಸಿದರು.

Advertisement

ಇದರೊಂದಿಗೆ ಫಿನ್‌ಲಾÂಂಡ್‌ನ‌ಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಭಾರತ ಒಟ್ಟಾರೆ 2ನೇ ಪದಕ ಗೆದ್ದಂತಾಯಿತು. ಬುಧವಾರವಷ್ಟೇ ಭಾರತ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದನ್ನು ಸ್ಮರಿಸಬಹುದು.  ಇದಕ್ಕೂ ಮುನ್ನ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಮಂಜು ಕುಮಾರಿ 5-1 ಅಂತರದಿಂದ ಬಲ್ಗೇರಿಯಾದ ಅಲೆಕ್ಸಾಂಡರಿನಾ ಅವರನ್ನು ಸೋಲಿಸಿದ್ದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ ಆಟಗಾರ್ತಿ ಯೂಜುರು ಕುಮಾನೊ ವಿರುದ್ಧ ಸೋತು ಸೆಮಿಫೈನಲ್‌ನಿಂದ ಔಟಾಗಿದ್ದರು. ಹೀಗಿದ್ದರೂ ಮಂಜು ಎದುರು ಗೆದ್ದಿದ್ದ ಜಪಾನ್‌ ಆಟಗಾರ್ತಿ ಫೈನಲ್‌ನಲ್ಲಿ ಗೆದ್ದಿದ್ದರಿಂದ ಮಂಜಿಗೆ ರಿಪಿಚಾಜ್‌ನಲ್ಲಿ ಅವಕಾಶ ಸಿಕ್ಕಿತು.

Advertisement

Udayavani is now on Telegram. Click here to join our channel and stay updated with the latest news.

Next