Advertisement

“ಮಂಜೇಶ್ವರ ಬಂದರು ನಿರ್ಮಾಣ ಅವೈಜ್ಞಾನಿಕ’

07:57 PM Sep 22, 2019 | Sriram |

ಮಂಜೇಶ್ವರ: ಮಂಜೇಶ್ವರ ಮೀನುಗಾರಿಕಾ ಬಂದರು ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆದಿದೆಯೆಂದೂ ಇದರ ಪರಿಣಾಮವಾಗಿ ಇಲ್ಲಿನ ಕಾರ್ಮಿಕರು ಸಂಕಷ್ಟವನ್ನು ಎದುರಿಸುವಂತಾಗಿದೆಯೆಂದೂ ಮಂಜೇಶ್ವರ ಫಿಶ್‌ ಹಾರ್ಬರ್‌ ಮತ್ಸ Â ತೊಝಿಳಾಲಿ ಸಂಘದ ಪದಾಧಿಕಾರಿಗಳು ಮಂಜೇಶ್ವರ ಪ್ರಸ್‌ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ದೋಣಿಗಳು ಹಾದು ಹೋಗುವ ಸ್ಥಳಗಳಲ್ಲಿ ಮರಳು ರಾಶಿ ಬೀಳುವುದರಿಂದ ಮೀನುಗಾರಿಕೆಗೆ ತೆರಳಿ ಹಿಂದಿರುಗುವವರು ದಡ ಸೇರಲು ಹರಸಾಹಸ ಪಡುತ್ತಿದ್ದಾರೆ ಹಾಗೂ ಅಪಾಯವನ್ನು ಎದುರಿಸುವಂತಾಗಿದೆ. ಕಳೆದ ಒಂದು ವಾರದೊಳಗೆ ಇಲ್ಲಿ ಎರಡು ದುರಂತಗಳು ಸಂಭವಿಸಿವೆ. ಕಾರ್ಮಿಕರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿ ಅವಘಡಗಳು ನಿತ್ಯ ಸಂಭವಿಸುತ್ತಿವೆ. ಇಲ್ಲಿನ ಮೀನುಗಾರಿಕೆಯಿಂದ ಮಾತ್ರ ಬದುಕು ಕಟ್ಟಿಕೊಂಡಿರುವ ನೂರಾರು ಮೀನು ಕಾರ್ಮಿಕರು ಹಾರ್ಬರ್‌ ಅವೈಜ್ಞಾನಿಕದಿಂದಾಗಿ ಭಯದಲ್ಲಿ ಬದುಕು ಸಾಗಿಸುವಂತಾಗಿದೆ.

ಕಾಮಗಾರಿ ಪ್ರಾರಂಭದಲ್ಲಿಯೇ ಇಲ್ಲಿನ ಮೀನು ಕಾರ್ಮಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಎಂಜಿನಿಯರ್‌ಗಳಿಗೆ ಹಾರ್ಬರ್‌ನ ಅವೈಜ್ಞಾನಿಕ ಕಾಮಗಾರಿ ಕುರಿತು ಮಾಹಿತಿ ನೀಡಿದ್ದರೂ, ಇದನ್ನು ಅಧಿಕಾರಿ ವರ್ಗ ಗಮನಹರಿಸಿಲ್ಲ ಎಂದು ಆರೋಪಿಸಿರುವ ಇವರು ಇದರ ಪರಿಣಾಮ ಇಲ್ಲಿ ನಿತ್ಯ ಅವಘಡ ಸಂಭವಿಸುತ್ತಿದೆಯೆಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಎಂ. ಅಶ್ರಫ್‌, ಸಂಘದ ಉಪಾಧ್ಯಕ್ಷ ಅಬ್ದುಲ್‌ ರಹಿಮಾನ್‌ ಹಾಜಿ, ಕಾರ್ಯದರ್ಶಿ ಮೊಹಮ್ಮದ್‌ ಅಲಿ, ಜತೆ ಕಾರ್ಯದರ್ಶಿಗಳಾದ ಅಝೀಝ್, ಅಶ್ರಫ್‌ ಉಪಸ್ಥಿತರಿದ್ದರು.

ಮೂಲ ಸೌಕರ್ಯ ಒದಗಿಸಲು ಸ್ಪಂದಿಸಿ
ಪ್ರಸ್ತುತ ತಡೆಗೋಡೆ ನಿರ್ಮಾಣದ ಕಾಮಗಾರಿ ಶಾಸ್ತ್ರೀಯವಾಗಿ ಮಾಡಬೇಕು. ದೋಣಿ ಹಾದು ಹೋಗುವ ಸ್ಥಳಗಳಲ್ಲಿ ಮರಳು ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು, ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸ ಬೇಕು, ಜೆಟ್ಟಿ ನಿರ್ಮಾಣದ ಲೋಪ ಗಳನ್ನು ಶೀಘ್ರವೇ ಪರಿಹರಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ ಹಾಗೂ ಶೌಚಾಲಯದ ಕಾಮಗಾರಿ ನಡೆಸಬೇಕು, ಹೊಸಬೆಟ್ಟು ಕಡಪ್ಪುರದಲ್ಲಿ ನೂತನ ಮೀನುಗಾರಿಕೆ ಜೆಟ್ಟಿ ನಿರ್ಮಿಸ ಬೇಕು, ಸಂಪೂರ್ಣ ಮೂಲ ಸೌಕರ್ಯಗಳೊಂದಿಗೆ ಮಾತ್ರವೇ ಹಾರ್ಬರ್‌ನ ಉದ್ಘಾಟನೆ ನಡೆಸ ಬೇಕು. ಈ ಕುರಿತಂತೆ ತಂಡವೊಂದು ಮುಖ್ಯಮಂತ್ರಿ, ಬಂದರು ಸಚಿವರನ್ನು ಭೇಟಿ ಮಾಡಿ ಮನವಿ ನೀಡಲಾಗು ವುದು. ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next