ಮಂಗಳೂರು: ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಡಿ. 13ರಿಂದ 19ರ ವರೆಗೆ ನಡೆಯಲಿದೆ.
13ರಂದು ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಮಂಗಳಾರತಿ ನಡೆಯಲಿದೆ. 14ರಂದು ಮೃತ್ತಿಕಾರೋಹಣ, ಧ್ವಜಾರೋಹಣ ನಡೆಯಲಿರುವುದು.
ಯಜ್ಞ, ಮಹಾಪೂಜೆ, ಸಮಾರಾಧನೆ ಹಾಗೂ ರಾತ್ರಿಉತ್ಸವ, ವಸಂತ ಪೂಜೆ, ಮಂಗಳಾರತಿ ನಡೆಯಲಿದೆ. 15ರಂದು ಹಗಲು ಉತ್ಸವ, ಯಜ್ಞ, ಮಹಾಪೂಜೆ, ಸಮಾರಾಧನೆ, ರಾತ್ರಿ ಲಾಲ್ಕಿ ಉತ್ಸವ, ಚಂದ್ರಮಂಡಲ, ಸಣ್ಣರಥದಲ್ಲಿ ಉತ್ಸವ ಹಾಗೂ ಮಹಾಪೂಜೆ ನಡೆಯಲಿದೆ.
ಡಿ. 16ರಂದು ಹಗಲು ಉತ್ಸವ, ಯಜ್ಞ, ಮಹಾಪೂಜೆ, ಸಮಾರಾಧನೆ, ರಾತ್ರಿ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣರಥದಲ್ಲಿ ಉತ್ಸವ, ವಸಂತ ಪೂಜೆ ಮಂಗಳಾರತಿ ನಡೆಯಲಿರುವುದು.
17ರಂದು ಸ್ವರ್ಣ ಲಾಲ್ಕಿಯಲ್ಲಿ ಹಗಲು ಉತ್ಸವ, ಅಭಿಷೇಕ, ತುಲಾಭಾರ, ನಡೆಯಲಿದೆ. ಸಂಜೆ ಯಜ್ಞಾರತಿ, ಬಲಿ, ಮಹಾಪೂಜೆ, ಸಮಾರಾಧನೆ, ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ ಉತ್ಸವ, ಅಡ್ಡ ಪಲ್ಲಕ್ಕಿ ಉತ್ಸವ, ಸಣ್ಣರಥದಲ್ಲಿ ಉತ್ಸವ, ವಸಂತ ಪೂಜೆ, ಮಂಗಳಾರತಿ, 18ರಂದು ಧರ್ಮ, ಮಹಾಪೂಜೆ, ಯಜ್ಞ ಪೂರ್ಣಾಹುತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಹಾಗೂ ಸಂಜೆ 5ಕ್ಕೆ ರಥಾರೋಹಣ, ರಾತ್ರಿ ಮಂಗಳಾರತಿ, ಅನಂತರ ಸಮಾರಾಧನೆ ನಡೆಯಲಿರುವುದು.
ಡಿ. 19ರಂದು ಅವಭೃಥ ಉತ್ಸವ, ಶೇಷ ತೀರ್ಥದಲ್ಲಿ ಸ್ನಾನದ ಅನಂತರ ಧ್ವಜಾವರೋಹಣ ನಡೆಯುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ. ಗಣಪತಿ ಪೈ ಹಾಗೂ ಎಂ. ನಿತಿನ್‌ಚಂದ್ರ ಪೈ, ಜಿ. ಪ್ರಶಾಂತ್ ಪೈ, ಪ್ರಶಾಂತ್ ಹೆಗ್ಡೆ, ಪಿ. ರಾಜೇಶ್ ಪೈ, 18 ಪೇಟೆಯ ಪ್ರತಿನಿಧಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.