Advertisement
ಮಂಡಲದ 198 ಬೂತ್‌ಗಳ ಎಲ್ಲಾ ಮತದಾನ ಕೇಂದ್ರಗಳಲ್ಲೂ ಮತದಾರರು ಮತದಾನ ಮಾಡಿದ ವೀಡಿಯೋ ಚಿತ್ರೀಕರಣ ನಡೆಸಲಾಯಿತು. ನಕಲಿ ಮತದಾನ ತಡೆಯಲು ಕೆಲವೊಂದು ಬಿಗಿ ಕ್ರಮ ಕೈಗೊಳ್ಳಲಾಯಿತು. 20 ಕಡೆಗಳಲ್ಲಿ ವೆಬ್ ಕ್ಯಾಮರಾ ಸ್ಥಾಪಿಸಲಾಗಿತ್ತು. ಪರದೆ ಧರಿಸಿದ ಮಹಿಳೆಯರ ಪರದೆಯನ್ನು ಎತ್ತಲು ಎಲ್ಲ ಮತದಾನ ಕೇಂದ್ರಗಳಲ್ಲಿ ಓರ್ವ ಮಹಿಳಾ ಉದ್ಯೋಗಿಯನ್ನು ನೇಮಿಸಲಾಗಿತ್ತು. ಓರ್ವ ಮಹಿಳಾ ಪೊಲೀಸ್ ಪೇದೆ ಸಹಿತ ಎಲ್ಲ ಮತದಾನ ಕೇಂದ್ರಗಳಲ್ಲಿ ತಲಾ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು.ಕೆಲವು ಸೂಕ್ಷ ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
Related Articles
Advertisement
ಅ. 24ರಂದು ಮತ ಎಣಿಕೆಒಟ್ಟು 7 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧೆಯಲ್ಲಿದ್ದು ಐಕ್ಯರಂಗದ ಎಂ.ಸಿ. ಕಮರುದ್ದೀನ್,ಎನ್‌ಡಿಎ ಪಕ್ಷದ ಕುಂಟಾರು ರವೀಶ ತಂತ್ರಿ, ಎಡರಂಗದ ಎಂ ಶಂಕರ ರೈ ಮಾಸ್ಟರ್ ಪ್ರಧಾನ ತ್ರಿಕೋನ ಸ್ಪರ್ಧಿಗಳಾಗಿರುವರು. ಚುನಾವಣೆಯ ಮತ ಎಣಿಕೆ ಅ. 24ರಂದು ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ವಿದ್ಯಾಲಯದಲ್ಲಿ ನಡೆದು ಫಲಿತಾಂಶ ಪ್ರಕಟಗೊಳ್ಳಲಿರುವುದು. 7 ಗಂಟೆಗೆ ಆರಂಭ
ಮತಯಂತ್ರದ ಧೃಢೀಕರಣಕ್ಕಾಗಿ ಬೆಳಗ್ಗೆ ಎಲ್ಲ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 5.30 ಕ್ಕೆ ಅಣಕು ಮತದಾನ ನಡೆಸಿದ ಬಳಿಕ 7 ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ ಕೆಲವು ಕಡೆಗಳಲ್ಲಿ ಮತದಾನ ಯಂತ್ರ ಕೆಟ್ಟು ಗಂಟೆಗಟ್ಟಲೆಗಳ ಕಾಲ ಮತದಾನಕ್ಕೆ ತಡೆಯುಂಟಾಯಿತು.