ಕಾಸರಗೋಡು: ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಮಂಜೇಶ್ವರ ಬ್ಲಾಕ್ ಪಂ. ವತಿಯಿಂದ ವಿಶೇಷ ಯೋಜನೆ ಜಾರಿಗೊಳ್ಳುತ್ತಿದೆ.
ಈ ಯೋಜನೆಯ ಅಂಗವಾಗಿ ಕೃಷಿಕರಿಗೆ ವಿವಿಧ ಕೃಷಿ ಉಪಕರಣಗಳನ್ನು ಹಸ್ತಾಂಮಂಜೇಶ್ವರ ಬ್ಲಾಕ್‌ಮಂಜೇಶ್ವರ ಬ್ಲಾಕ್‌ತರಿಸಲಾಗಿದೆ. 46 ಲಕ್ಷ ರೂ. ಮೌಲ್ಯದ ಮಿನಿ ಟ್ರಾÂಕ್ಟರ್, ರೀಪ್ಪರ್, ಪವರ್ ಟಿಲ್ಲರ್, ಟ್ರಾನ್ಸ್‌ಪ್ಲಾಂಟರ್ ಸಹಿತ 21 ಯಂತ್ರಗಳು ಈ ನಿಟ್ಟಿನಲ್ಲಿ ವಿತರಣೆಗೊಂಡಿವೆ.
ಬ್ಲಾಕ್ ಪಂ.ನ ಯೋಜನೆ ನಿಧಿಯಿಂದ ಮೊಬಲಗು ನೀಡಲಾಗಿದೆ. ಪ್ರತಿ ಗ್ರಾ.ಪಂ.ನ ಗದ್ದೆ ಸಮಿತಿಗಳ ಮೇಲ್ನೋಟದಲ್ಲಿ ಎಲ್ಲ ಕೃಷಿಕರಿಗೂ ಕಿರು ಬೆಲೆಯ ಬಾಡಿಗೆ ಮೂಲಕ ಕೃಷಿ ಉಪಕರಣಗಳ ಬಳಕೆ ನಡೆಸಬಹುದಾದ ಸೌಲಭ್ಯ ಈ ಮೂಲಕ ಲಭಿಸಲಿದೆ. ಅನಂತರ ಬರಬಹುದಾದ ದುರಸ್ತಿ ಕಾಮಗಾರಿ ಸಹಿತದ ವೆಚ್ಚವನ್ನು ಬಾಡಿಗೆ ಮೊಬಲಗಿನಿಂದ ಭರಿಸಲಾಗುವುದು.
ಮಂಜೇಶ್ವರ ಬ್ಲಾಕ್ ಪಂ. ಕಚೇರಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಕೃಷಿ ಉಪಕರಣಗಳ ವಿತರಣೆ ಯನ್ನು ಉದ್ಘಾಟಿಸಿದರು. ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿ ದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಮುಸ್ತಫಾ ಉದ್ಯಾವರ, ಫಾತಿಮತ್ ಸುಹರಾ, ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷೆ ಆಯಿಷಾ ಪೆರ್ಲ, ಬ್ಲಾಕ್ ಪಂ. ಸದಸ್ಯರಾದ ಸಾಯಿರಾ ಬಾನು, ಬಿ.ಎಂ. ಆಶಾಲತಾ, ಮಿಸ್‌ಬಾನಾ, ಕೆ.ಆರ್. ಜಯಾನಂದ, ಪ್ರಸಾದ್ ರೈ, ಬ್ಲಾಕ್ ಪಂ. ಕಾರ್ಯದರ್ಶಿ ಎನ್. ಸುರೇಂದ್ರನ್, ಎ.ಡಿ.ಎ. ನಿಷಾ ಮತ್ತಿ ತರರು ಉಪಸ್ಥಿತರಿದ್ದರು.
ಯಾಂತ್ರೀಕೃತ ಕೃಷಿಗೆ ವಿಶೇಷ ಯೋಜನೆ
ಮಂಜೇಶ್ವರ ಮೂಲತಃ ಕೃಷಿ ಪ್ರಧಾನ ಪ್ರದೇಶವಾಗಿದ್ದರೂ ಕಳೆದ ಅನೇಕ ವರ್ಷಗಳಿಂದ ಕೂಲಿ ವೆಚ್ಚ, ಕಾರ್ಮಿಕರ ಕೊರತೆ ಇತ್ಯಾದಿ ಕಾರಣಗಳಿಂದ ಸಮಸ್ಯೆ ಎದುರಿಸು ವಂತಾ ಗಿತ್ತು. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯ ಈ ಅವಧಿಯಲ್ಲಿ ಯಾಂತ್ರೀಕೃತ ಕೃಷಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಕೃಷಿ ವಲಯದ ಸಮ ಸ್ಯೆಗೆ ಪರಿಹಾರ ಲಭಿಸಿ, ಪುನಶ್ಚೇತನವೂ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಬ್ಲಾಕ್ ಪಂ. ಗದ್ದೆ ಸಮಿತಿಗಳ ಮುಖಾಂತರ ಕೃಷಿಕರಿಗೆ ಉಪಕರಣಗಳನ್ನು ವಿತರಿಸುವ ಯೋಜನೆ ಜಾರಿಗೊಳಿಸಿದೆ.
-ಎ.ಕೆ.ಎಂ. ಅಶ್ರಫ್, ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂ.