Advertisement
ಅಲ್ಲದೆ ಉಪ ಚುನಾವಣೆ ಗಿರುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು ಅವರು ತಿಳಿಸಿದ್ದಾರೆ.
Related Articles
Advertisement
ಮಂಜೇಶ್ವರ ಮಂಡಲದಲ್ಲಿ ಒಟ್ಟು 198 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳ ಲ್ಲಿಯೂ ಚುನಾವಣಾ ಆಯೋಗದ ಆದೇಶ ಪ್ರಕಾರವಿರುವ ಮೂಲ ಸೌಲಭ್ಯಗಳಿರುವುವು. ಸರಳ, ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಒಟ್ಟು 18 ನೋಡಲ್ ಅಧಿ ಕಾರಿಗಳನ್ನು ನಿಯೋಜಿಸಲಾಗಿದೆ. ಮಂಜೇಶ್ವರವು ಕರ್ನಾಟಕದ ಗಡಿಪ್ರದೇಶಕ್ಕೆ ತಾಗಿಕೊಂಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿ ಒಟ್ಟು 9 ಚೆಕ್‌ಪೋಸ್ಟ್‌ಗಳಿರುವುದರಿಂದ ಇಲ್ಲಿ ತೀವ್ರ ತಪಾಸಣೆ ನಡೆಸಲಾಗುವುದು. ಅಲ್ಲದೆ ಕರ್ನಾಟಕದಿಂದ ಕೇರಳಕ್ಕೆ ಬರುವವರನ್ನು ಹಾಗೂ ಕೇರಳದಿಂದ ಕರ್ನಾಟಕಕ್ಕೆ ತೆರಳುವವರನ್ನು ಗಮನಿಸಲಾಗುವುದು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವೆಬ್‌ಕಾಸ್ಟಿಂಗ್ ಮತಗಟ್ಟೆಯಿಲ್ಲ. ಸಮಸ್ಯೆ ತಲೆದೋರಬಹುದಾದ ಮತ ಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನೇಮಕ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.
2,12,086 ಮತದಾರರುಪ್ರಸ್ತುತ ಪ್ರಕಟಿಸಲಾದ ಮತದಾರರ ಪಟ್ಟಿಯಲ್ಲಿ ಒಟ್ಟು 2,12,086 ಮಂದಿ ಮತದಾರರಿದ್ದಾರೆ. ಇದರಲ್ಲಿ 1,06,624 ಮಂದಿ ಪುರುಷರು ಮತ್ತು 1,05,462 ಮಂದಿ ಮಹಿಳೆಯರು ಒಳಗೊಂಡಿದ್ದಾರೆ. ಮಂಜೇಶ್ವರ ಉಪಚುನಾವಣೆಗೆ ಸಂಬಂಧಿಸಿ ಸೆ.20ರ ತನಕ ಲಭಿಸಿದ ಅರ್ಜಿಗಳನ್ನು ಮಾತ್ರವೇ ಈ ಬಾರಿಯ ಮತದಾರರ ಪಟ್ಟಿಗೆ ಪರಿಗಣಿಸಲಾಗುವುದು. ಆ ಪ್ರಕಾರ ಮತದಾರರ ಪಟ್ಟಿಯಲ್ಲಿ ಸೇರಿಸಲು 4,533 ಅರ್ಜಿಗಳು ಮತ್ತು ಹೆಸರು ಹೊರತುಪಡಿಸಲು 670 ಅರ್ಜಿಗಳು ದೊರಕಿವೆ. ಈ ಎಲ್ಲ ಅರ್ಜಿಗಳನ್ನು ಪರಿಗಣಿಸಿ ಸೆ.30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ನೇಮಕಗೊಂಡ ನೋಡಲ್ ಅಧಿಕಾರಿಗಳು
1 ಮಾನವ ಸಂಪನ್ಮೂಲ ನೋಡಲ್ ಅಧಿಕಾರಿ: ಡಿ.ಸಿ. ಕಚೇರಿಯ ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್ (9495561796).
2 ಇ.ವಿ.ಎಂ., ವಿವಿಪಾಟ್ ಉಸ್ತುವಾರಿ ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹುಸೂರ್ ಶಿರಸ್ತೇದಾರ್ ಕೆ. ನಾರಾಯಣನ್ (9495561796).
3 ಸಂಚಾರಿ ಉಸ್ತುವಾರಿ ನೋಡಲ್ ಅಧಿಕಾರಿ: ಕಾಸರಗೋಡು ಸಾರಿಗೆ ವಲಯ ಅಧಿಕಾರಿ ಮನೋಜ್ (9447003891).
4 ತರಬೇತು ನೋಡಲ್ ಅಧಿಕಾರಿ: ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್, ಹಿರಿಯ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಕೆ. (9446017388)
5 ಸಾಮಗ್ರಿ ಉಸ್ತುವಾರಿ ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಕಿರಿಯ ವರಿಷ್ಠಾಧಿಕಾರಿ ಅಜಿತ್ ಬಿ (8547432192)
6 ಕಾನೂನು ಪಾಲನೆ ಉಸ್ತುವಾರಿ ನೋಡಲ್ ಅಧಿಕಾರಿ: ವಲಯ ಕಂದಾಯಾಧಿಕಾರಿ ಎನ್.ದೇವಿದಾಸ್ (9447726900)
7 ಖರ್ಚುವೆಚ್ಚ ನಿಗಾ ನೋಡಲ್ ಅಧಿಕಾರಿ: ಜಿಲ್ಲಾ ಹಣಕಾಸು ಅಧಿಕಾರಿ ಕೆ. ಸತೀಶನ್ (9447648998)
8 ನಿರೀಕ್ಷಕರ ನೋಡಲ್ ಅಧಿಕಾರಿ: ಸರ್ವೇ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ಸುನಿಲ್ (9447528908)
9 ಅಂಚೆ ಮತದಾನ ನೋಡಲ್ ಅಧಿಕಾರಿ: ವಿಶೇಷ ತಹಶೀಲ್ದಾರ್ ಸೂರ್ಯ ನಾರಾಯಣನ್ ವಿ. (9446079985)
10 ಮಾಧ್ಯಮ ಮತ್ತು ಎಂ.ಸಿ.ಎಂ.ಸಿ. ನೋಡಲ್ ಅಧಿಕಾರಿ: ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. (8547860180)
11 ಕಂಪ್ಯೂಟರ್ ವಿಭಾಗ ನೋಡಲ್ ಅಧಿಕಾರಿ: ಎನ್.ಐ.ಸಿ. ಜಿಲ್ಲಾ ಮಾಹಿತಿ ಅಧಿಕಾರಿ ರಾಜನ್ ಕೆ. (9400158845)
12 ಸ್ವೀಪ್ ನೋಡಲ್ ಅಧಿಕಾರಿ: ತಾಲೂಕು ಕಚೇರಿ ಕಿರಿಯ ವರಿಷ್ಠಾಧಿಕಾರಿ ಗೋವಿಂದನ್ ಎಸ್. (8301811968)
13 ಹೆಲ್ಪ್ಲೈನ್, ದೂರು ಸ್ವೀಕಾರ ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಚಿತ್ರಾನಾಥ್ ಆರ್. (9497707695)
14 ಐ.ಸಿ.ಟಿ. ಅಪ್ಲಿಕೇಶನ್ ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಚಿತ್ರಾನಾಥ್ ಆರ್. (9497707695)
15 ಎಸ್.ಎಂ.ಎಸ್. ಮಾನಿಟರಿಂಗ್ ಮತ್ತು ಸಂವಹನ ಯೋಜನೆ ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿ ಕಿರಿಯ ವರಿಷ್ಠಾಧಿಕಾರಿ ಅಜಿತ್ ಬಿ. (8547432192)
16 ಮತದಾರರ ಸಹಾಯವಾಣಿ (1950) ನೋಡಲ್ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಜೆ.ಎಸ್. ಶ್ರೀವಿದ್ಯಾ ಟಿ.ಪಿ. (8281940809)
17 ಸೈಬರ್ ರಕ್ಷಣೆ ನೋಡಲ್ ಅಧಿಕಾರಿ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: ಪಿ.ಬಿ.ಪ್ರಷೋಬ್ (9497990141)
18 ವಿಶೇಷ ಚೇತನರ ನೋಡಲ್ ಅಧಿಕಾರಿ: ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಬಿಂದು (9495672271). ಮತ ಯಂತ್ರ ಆಗಮನ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಭಾರತ್ ಇಲೆ ಕ್ಟ್ರಾನಿಕ್ಸ್ ನಿರ್ಮಿಸಿದ ಎಂ.ತ್ರೀ. ವಿಭಾಗಕ್ಕೆ ಸೇರಿದ ಇ.ವಿ.ಎಂ, ವಿವಿಪಾಟ್ ಯಂತ್ರ ಕಾಸರಗೋಡಿಗೆ ಬಂದಿದೆ. 400 ಬ್ಯಾಲೆಟ್ ಯೂನಿಟ್, 400 ಕಂಟ್ರೋಲ್ ವಿ.ವಿ.ಪಾಟ್ ಯಂತ್ರ ಗಳು ಕೊಯಮತ್ತೂರಿನಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮತ್ತು ಸಶಸ್ತ್ರ ಪೊಲೀಸ್ ಭದ್ರತೆಯೊಂದಿಗೆ ಇ.ವಿ.ಎಂ. ಗೋದಾಮಿಗೆ ಆಗಮಿಸಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಎಂಜಿನಿಯರ್‌ಗಳು ಯಂತ್ರಗಳ ಪ್ರಾಥಮಿಕ ತಪಾಸಣೆ ನಡೆಸಿದರು. ಚುನಾವಣ ಮತ ಯಂತ್ರಗಳ ಪ್ರಾಥಮಿಕ ತಪಾಸಣೆ ನಡೆಸಲು ಅಗತ್ಯವಾದ ಸಿಬಂದಿಯನ್ನು ನೇಮಿಸಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ. ಎಡ-ಐಕ್ಯರಂಗ ಅಭ್ಯರ್ಥಿಗಳ ಘೋಷಣೆ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಯಲ್ಲಿ ಎಲ್‌ಡಿಎಫ್, ಯುಡಿಎಫ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಎಂ.ಸಿ. ಖಮರುದ್ದೀನ್ ಅವರನ್ನು ಪಕ್ಷದ ಅಧ್ಯಕ್ಷರು ಘೋಷಿಸಿದ್ದರು. ಎಲ್‌ಡಿಎಫ್ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ರೈ ಅವರ ಹೆಸರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಗುರುವಾರ ಬೆಳಗ್ಗೆ ಘೋಷಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರ ಹೆಸರು ಪರಿಗಣನೆಯಲ್ಲಿದೆ.