Advertisement
ಕೊಡವೂರು ದೇವಳದಲ್ಲಿ ಇತ್ತೀಚೆಗೆ ಡಾ| ಮಂಜರಿಚಂದ್ರ ನೇತೃತ್ವದ ಸೃಷ್ಟಿ ನೃತ್ಯ ಕಲಾ ಕುಟೀರ, ಉಡುಪಿ ಇವರಿಂದ ಭರತ ನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಪ್ರಾರಂಭದಲ್ಲಿ ನೃತ್ಯಾಧಿಪತಿ ನಟರಾಜ ಸ್ತುತಿಯನ್ನೊಳಗೊಂಡ ಪುಷ್ಪಾಂಜಲಿಯೊಂದಿಗೆ ನೃತ್ಯ ಕುಸುಮಗಳು ರಂಗದಲ್ಲಿ ಅರಳುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಧ್ವನಿ ಮುದ್ರಿತ ಸಂಗೀತವಾಗಿದ್ದರೂ ಹಿತಮಿತವಾಗಿ ಕೇಳುಗರ ಕಿವಿಗಳಿಗೆ ಅಪ್ಯಾಯಮಾನವಾಗಿ ನೃತ್ಯದ ಚಲನವಲನಗಳಿಗೆ ಅನುಗುಣವಾಗಿತ್ತು. ಅನಂತರ ಡಾ| ಮಂಜರಿಚಂದ್ರರವರ ಪ್ರಧಾನ ಭೂಮಿಕೆಯಲ್ಲಿ ತೋಡೆಯ ಮಂಗಲಮ್ ರಾಗ ಮಾಲಿಕೆಯನ್ನು ವಿವಿಧ ತಾಳಗಳಲ್ಲಿ ವೈವಿಧ್ಯಮಯವಾಗಿ ಸಹನರ್ತಕಿಯರ ಸಹಕಾರದೊಂದಿಗೆ ಸಾಕಾರಗೊಂಡಿತು. ಮುಂದೆ ದೇವರ ನಾಮವೊಂದನ್ನು ಆದಿ ತಾಳದಲ್ಲಿ ನೃತ್ಯತಂಡ ಪ್ರದರ್ಶಿಸಿತು. ಜಿತೇಶ್ ಬಂಗೇರ ಇವರ ಪದಾಭಿನಯದ ಮಾರಮಣನ ಉಮಾರಮಣನ ಎನ್ನುವ ದೇವರ ನಾಮ ಮುದ ನೀಡಿತು. ಭರತನಾಟ್ಯ ಕಲಾವಿದರ ಆರಾಧ್ಯ ದೇವರಾದ ಈಶ್ವರನ ಕುರಿತಾದ ಒಂದಾದರೂ ನೃತ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ನೀಡುವ ಪರಿಪಾಠ ಬೆಳೆದು ಬಂದಿದೆ. ಅಂತೆಯೇ ಅಭೋಗಿರಾಗ ಆದಿತಾಳದಲ್ಲಿ ಪ್ರಸ್ತುತಿಗೊಂಡ ಶಿವಸ್ತುತಿ ಕ್ಷಿಪ್ರಗತಿಯ ನಡೆ, ಶಿಷ್ಟ ಅಡವುಗಳನ್ನೊಗೊಂಡು, ಮಂದಗತಿಯಿಂದ ತೀವ್ರಗತಿಗೆ, ವೈಧ್ಯಮಯ ಭಾವ ಮುದ್ರೆಗಳೊಂದಿಗೆ ಮನಗೆದ್ದಿತು.
Advertisement
ಮಂಜರಿ ತಂಡದವರ ನೃತ್ಯ ಮಂಜರಿ
07:19 PM Jul 11, 2019 | mahesh |
Advertisement
Udayavani is now on Telegram. Click here to join our channel and stay updated with the latest news.