Advertisement

ಮಂಜಮ್ಮ ಜೋಗತಿ ಆತ್ಮಕಥನ ಕಲಬುರಗಿ ವಿವಿ ಪಠ್ಯಕ್ಕೆ ಆಯ್ಕೆ

06:18 PM Mar 06, 2021 | Team Udayavani |

ಹೊಸಪೇಟೆ: ಪದ್ಮಶ್ರೀ ಮಂಜಮ್ಮ ಜೋಗತಿ ಅವರ ಆತ್ಮಕಥನ ಬಿಎಸ್ಸಿ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆಯಾಗಿದೆ. ತಾಲೂಕಿನ ಮರಿಯಮ್ಮನಹಳ್ಳಿಯ ಪದ್ಮಶ್ರೀಗೆ ಭಾಜನರಾಗಿರುವ ಮಾತಾ ಮಂಜಮ್ಮ ಜೋಗತಿ ಆತ್ಮಕಥೆ ಕಲುಬುರಗಿ ವಿವಿಯ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆಯಾಗಿದೆ.

Advertisement

“ನಡುವೆ ಸುಳಿವ ಹೆಣ್ಣು’ ಶೀರ್ಷಿಕೆಯಲ್ಲಿ 248 ಪುಟಗಳ ಆತ್ಮಕಥನ ಹೊರತರಲಾಗಿದೆ. ಚೆನ್ನಪಟ್ಟಣದ ಪಲ್ಲವ ಪ್ರಕಾಶನದ ಮೂಲಕ ಪ್ರಕಟಣೆ ಮಾಡಲಾಗಿದ್ದು, ಸದ್ಯ ಈ ಪುಸ್ತಕ ಕಲಬುರಗಿ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ ಬೇಸಿಕ್‌ ಕನ್ನಡಕ್ಕೆ ಆಯ್ಕೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದ್‌ ಕೂಡ್ಲಿಗಿಯ ಲೇಖಕ ಡಾ| ಅರುಣ್‌ ಜೋಳದ ಕೂಡ್ಲಿಗಿಯವರು ನಿರೂಪಣೆ ಮಾಡಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ, ಡಾ| ಸಬೀಹಾ ಭೂಮಿಗೌಡ ಬೆನ್ನುಡಿ ಬರೆದಿದ್ದಾರೆ. ಕಲಬುರಗಿ ವಿವಿ ಬಿಎಸ್ಸಿ ಪದವಿ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆ ಮಾಡಿಕೊಂಡಿರೋದು ಹೆಮ್ಮೆ ಸಂಗತಿಯಾಗಿದ್ದು, ಆಯ್ಕೆಯಾಗಿದ್ದಕ್ಕೆ ನನಗೆ ಖುಷಿಯಾಗಿದೆ ಎಂದು ಮಂಜಮ್ಮ ಜೋಗತಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next