Advertisement

ರಿಸ್ಕ್ ತೆಗೆದುಕೊಳ್ಳದೇ ಹೋಗಿದ್ದರೆ ಖಂಡಿತವಾಗಿಯೂ ಬರಲು ಆಗುತ್ತಿರಲಿಲ್ಲ

03:10 PM Mar 03, 2022 | Shwetha M |

ಶಿವಮೊಗ್ಗ: ಯುದ್ಧಪೀಡಿತ ಉಕ್ರೇನ್ ನಿಂದ ವಾಪಾಸ್ಸಾದ ಸಾಗರದ ವಿದ್ಯಾರ್ಥಿನಿ ಮನೀಶಾ ಉಕ್ರೇನ್ ನಲ್ಲಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾಳೆ.

Advertisement

ನಾನು ಉಕ್ರೇನ್ ನ‌ ಕೀವ್ಸ್ ನಗರದಲ್ಲಿ ಸಿಲುಕಿಕೊಂಡಿದ್ದೆ. ಕ್ರೇನ್ ನ ಕೀವ್ಸ್ ಹಾಗೂ ಕಾರ್ಕೀವ್ಯೂ ಸಿಟಿಯ ಮೇಲೆ ಬಾಂಬ್ ದಾಳಿಯಾಗುತ್ತಿತ್ತು. ಅಲ್ಲಿಂದ ಹೊರಡಲು ನಮಗೆ ಯಾವುದೇ ದಾರಿ ಇರಲಿಲ್ಲ. ಸಾರಿಗೆ ವ್ಯವಸ್ಥೆಯೂ ಇರಲಿಲ್ಲ. ಬಾಂಬ್ ಬೀಳುತ್ತಿದ್ದರಿಂದ ಸರ್ಕಾರ ಕೂಡ ನಮ್ಮನ್ನು ರೀಚ್ ಮಾಡಲು ಅಗಿರಲಿಲ್ಲ. ನಮ್ಮ ರಿಸ್ಕ್ ಮೇಲೆ ಸೇಫ್ ಆಗಿರೋ ವೆಸ್ಟರ್ನ್ ಸಿಟಿ ಕಡೆ ಹೋಗೋಕೆ ಪ್ರಯತ್ನ ಪಟ್ಟಿದ್ದೆವು ಎಂದರು.

ಕರ್ಫ್ಯೂ ಇದ್ದಿದ್ದರಿಂದ ತುಂಬಾ ರಿಸ್ಕ್ ಜೊತೆಗೆ ಪರ್ಮಿಶನ್ ಸಹ ಇರಲಿಲ್ಲ. ಎಂಬೆಸ್ಸಿ ಹಾಗೂ ಸಂಪರ್ಕದಲ್ಲಿರುವವರು ಸಹ ಒಳಗೆ ಸೇಫ್ ಅಗಿ ಇರೋಕೆ ಹೇಳಿದ್ದರು. ರಿಸ್ಕ್ ತೆಗೆದುಕೊಳ್ಳದೇ ಹೋಗಿದ್ದರೆ ಖಂಡಿತವಾಗಿಯೂ ಬರಲು ಆಗುತ್ತಿರಲಿಲ್ಲ.

ಹೊರಡುವಾಗ ಕಾರು, ಟ್ರೈನ್ ಸೌಲಭ್ಯದ ಅಭಾವ ಹೆಚ್ಚಾಗಿತ್ತು. ಉಕ್ರೇನ್ ಲ್ವೀವ್ ಸಿಟಿಗೆ ಬಂದಮೇಲೆ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು. ಬಾರ್ಡರ್ ಕ್ರಾಸ್ ಮಾಡೋಕೆ, ಸ್ಟ್ಯಾಂಪಿಂಗ್ ಪ್ರೊಸೆಸ್ ಎಲ್ಲವೂ ಕಷ್ಟವಾಗಿತ್ತು. ಪೊಲೆಂಡ್ ಬಾರ್ಡರ್ ರೀಚ್ ಅಗಲೂ ಸಹ ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಸೇಫ್ ಸಿಟಿಯಿಂದ ಬಾರ್ಡರ್ ಗೆ ರೀಚ್ ಆಗೋಕೆ ವಿದ್ಯಾರ್ಥಿಗಳಿಗೆ ಕಷ್ಟವಾಯಿತು ಎಂದು ಹೇಳಿದರು.

ಬಾರ್ಡರ್ ರೀಚ್ ಅಗಲು 15 ರಿಂದ 20 ಕಿ.ಮೀ ನಾವು ನಡೆಯಬೇಕಾಯಿತು. ಇಲ್ಲಿನ ರೀತಿ ನಾರ್ಮಲ್ ಟೆಂಪರೇಚರ್ ಅಲ್ಲಿ ಇರಲಿಲ್ಲ. ಕೆಲವೊಂದು ಬಾರ್ಡರ್ ನಲ್ಲಿ -4 ಇಂದ -8 ರವರೆಗೆ ಟೆಂಪರೇಚರ್ ಇತ್ತು. ಬ್ಯಾಗ್, ಲಗೇಜ್ ಎಲ್ಲವನ್ನೂ ಹೊತ್ತುಕೊಂಡು ಬಾರ್ಡರ್ ಗೆ ಬಂದೆವು. ಬಾರ್ಡರ್ ಕ್ರಾಸ್ ಮಾಡಲು ನಮಗೆ ಸುಲಭವಾಗಿ ಬಿಡುತ್ತಿರಲಿಲ್ಲ ಎಂದು ಹೇಳಿದರು.

Advertisement

ಇದನ್ನೂ ಓದಿ:ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಜೊತೆ ಮಾತುಕತೆ ನಡೆಸಿದ ಸಿಎಂ ಬೊಮ್ಮಾಯಿ

ನಾನು ರೀಚ್ ಅದಾಗ ನೈಟ್ ಆಗಿತ್ತು. ಐದಾರು ಸಾವಿರ ಜನ ಆಕಡೆ- ಈಕಡೆ ಓಡುತ್ತಾ ಇದ್ದರು. ನನಗೆ ಇದೆಲ್ಲಾ ಫಸ್ಟ್ ಟೈಮ್. ನೋಡಿಯೇ ಇರಲಿಲ್ಲ. ತುಂಬಾ ಭಯವಾಗಿ ಹೋಗಿತ್ತು. ಎಲ್ಲಿ ಓಡಬೇಕು. ಏನು ಮಾಡಬೇಕು ಯಾವುದು ಗೊತ್ತಾಗುತ್ತಾ ಇರಲಿಲ್ಲ. ಪೊಲೆಂಡ್ ಬಾರ್ಡರ್ ರೀಚ್ ಅದ ಮೇಲೂ ನಮಗೆ ಸಹಾಯ ಸಿಗಲಿಲ್ಲ ಎಂದರು.

ಇಂಡಿಯನ್ ಎಂಬೆಸ್ಸಿಯ ಯಾವುದೇ ಅಧಿಕಾರಿ ಸಹಾಯ ಮಾಡಲು ಬಾರ್ಡರ್ ನಲ್ಲಿ ಇರಲಿಲ್ಲ.  ಮುಂದೆ ಹೋಗಿದ್ದವರಿಗೆ ಕರೆ ಮಾಡಿ ನಾವು ಎಲ್ಲಿ ಹೋಗಬೇಕು, ಏನು ಮಾಡಬೇಕು ಕೇಳಿಕೊಂಡೆವು. ಅಲ್ಲಿನ ಕರೆನ್ಸಿ ಇರಲಿಲ್ಲ, ಭಾಷೆ ಬರ್ತಾ ಇರಲಿಲ್ಲ‌. ಅಡ್ರೆಸ್ ಕೂಡ ಗೋತ್ತಾಗುತ್ತಿರಲಿಲ್ಲ. ಪೊಲೆಂಡ್ ರೀಚ್ ಆದ ಮೇಲೂ ಕೆಲವರು ಬೇರೆಡೆ ಹೋಗಿ ಸಿಲುಕಿಕೊಳುತ್ತಾ ಇದ್ದಾರೆ. ಅವರ ಬಳಿ ದುಡ್ಡಿಲ್ಲ. ನೆಟ್ ಹಾಗೂ ಅಲ್ಲಿನ‌ ಸಿಮ್ ಇಲ್ಲದೇ ಸಮಸ್ಯೆಯಾಗಿದೆ ಎಂದರು.

ಬಾರ್ಡರ್ ರೀಚ್ ಮೇಲೆ ಆದರೂ ಎಂಬೆಸ್ಸಿಯ ಅಧಿಕಾರಿಗಳು ಸಹಾಯ ಮಾಡಬೇಕು. ನಾವು 8 ಜನ ಹೇಗೋ ವಾಪಸ್ ಬಂದಿದ್ದೇವೆ. 200 ಕ್ಕೂ ಅಧಿಕ ವಿದ್ಯಾರ್ಥಿಗಳು ಇನ್ನೂ ಅಲ್ಲೆ ಉಳಿದಿದ್ದಾರೆ‌. ನಾನು ಇಲ್ಲಿ ತನಕ ಬರ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ಇದ್ದ ಕೀವ್ ಸಿಟಿಯ ಮೇಲೆ ಹೆಚ್ಚು ದಾಳಿಯಾಗುತ್ತಿತ್ತು. ಎಲ್ಲರ ಹಾರೈಕೆಯಿಂದ ಈಗ ವಾಪಸ್ ಬಂದಿದ್ದೇನೆ. ದೆಹಲಿ ಹಾಗೂ ಬೆಂಗಳೂರಿನಲ್ಲಿ ಸರ್ಕಾರದ ಅಧಿಕಾರಿಗಳಿಂದ ಸಹಾಯವಾಯಿತು. ಸಿಎಂ ಹಾಗೂ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next