ಇಸ್ಲಾಮಾಬಾದ್: ಪಾಕಿಸ್ತಾನ ದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಬದುಕು ಸುಲಭದ್ದಲ್ಲ. ಹೀಗಿರುವಾಗ ಅಲ್ಲಿನ ಹಿಂದೂ ಯುವತಿಯೊಬ್ಬರು ಪೊಲೀಸ್ ಉಪ ವರಿಷ್ಠಾಧಿಕಾರಿ ಸ್ಥಾನಕ್ಕೇರಿ ಸಾಧನೆ ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ:2021-22ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ರ‍್ಯಾಂಕ್ ಬಂದವರ ವಿವರ
ಪಾಕಿಸ್ತಾ ನದಲ್ಲಿ ಇಷ್ಟು ಉನ್ನತ ಸ್ಥಾನಕ್ಕೇರಿದ ಮೊದಲ ಯುವತಿ ಮನೀಶಾ ರೂಪೀಟ(26). ಮನೀಶಾ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್ ನವರು. 13ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ರೊಪೆತಾ ಮತ್ತು ಮೂರು ಸಹೋದರಿಯರಿಗೂ, ಹೆಣ್ಣು ಮಕ್ಕಳಿಗೆ ಇರುವ ವೃತ್ತಿ ಆಯ್ಕೆಯೆಂದರೆ ಅದು ಶಿಕ್ಷಕ ವೃತ್ತಿ ಅಥವಾ ವೈದ್ಯ ವೃತ್ತಿ ಅಷ್ಟೇ ಎಂದೇ ಬೆಳೆಸಲಾಗಿತ್ತು.
ಮನೀಶಾ ಅವರ ಮೂರೂ ಸಹೋದರಿಯರೂ ಈಗ ವೈದ್ಯೆಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತಮ್ಮ ಕೂಡ ವೈದ್ಯಕೀಯ ಶಿಕ್ಷಣವನ್ನೇ ಪಡೆಯುತ್ತಿದ್ದಾರೆ. ಆದರೆ ಅವರೆಲ್ಲರಿಗಿಂತ ಭಿನ್ನ ದಾರಿ ಹಿಡಿದ ಮನೀಶಾ ಗಂಡು ಮಕ್ಕಳಿಗೇ ಪ್ರಾಮುಖ್ಯತೆ ಇರುವ ರಾಷ್ಟ್ರದಲ್ಲಿ ದೊಡ್ಡದೊಂದು ಸಾಧನೆ ಮಾಡಿ ತೋರಿಸಿದ್ದಾರೆ.
ಬದುಕು ಬದಲಿಸಿದ ಅಂಕ: ಮನೀಶಾ ಕೂಡ ಸಹೋದರಿ ಯರಂತೆಯೇ ವೈದ್ಯಕೀಯ ಶಿಕ್ಷಣ ಪಡೆಯಲು ತಯಾರಾಗಿದ್ದರು. ಆದರೆ ಅವರಿಗೆ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ಆದ್ದರಿಂದ ವೈದ್ಯಕೀಯ ಕಾಲೇಜಿ ನಲ್ಲಿ ಸೀಟು ಸಿಕ್ಕಿಲ್ಲ. ಹಾಗಾಗಿ ಅವರು ಫಿಸಿಕಲ್ ಥೆರಪಿ ವಿಭಾಗ ದಲ್ಲಿ ಪದವಿಗೆ ಸೇರಿಕೊಂಡಿ ದ್ದಾರೆ.
ಅದರ ಜತೆಯಲ್ಲಿ ಸಿಂಧ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗೂ ತಯಾರಿ ಮಾಡಿ ಕೊಂಡಿದ್ದಾರೆ. ಒಟ್ಟು 468 ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದು, ಅದರಲ್ಲಿ ಮನೀಶಾ 16ನೇ ಸ್ಥಾನ ಪಡೆದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಅವರು ತರಬೇತಿ ಪಡೆಯುತ್ತಿದ್ದು, ತರಬೇತಿ ನಂತರ ಲ್ಯಾರಿ ಪ್ರದೇಶದಲ್ಲಿ ಡಿಎಸ್ ಪಿಯಾಗಿ ನೇಮಕ ವಾಗಲಿದ್ದಾರೆ.