Advertisement
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಅವರು, “ರೊಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್ ನೀಡುವ ಬಗ್ಗೆ ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧಾರ ಮಾಡಿಲ್ಲ. ಕೇಂದ್ರ ಸರ್ಕಾರವೂ ನಿರ್ಧಾರ ಮಾಡಿಲ್ಲ ಎಂದಾದರೆ ಬೇರೆ ಯಾರು ನಿರ್ಧರಿಸಲು ಸಾಧ್ಯ? ಮಾಧ್ಯಮಗಳಲ್ಲಿ ನಿರಾಶ್ರಿತರಿಗೆ ವಾಸ್ತವ್ಯಕ್ಕೆ ಫ್ಲ್ಯಾಟ್‌ಗಳನ್ನು ನೀಡಲಾಗುತ್ತಿದೆ ಎಂಬ ವರದಿಯನ್ನು ನೋಡಿಯೇ ವಿಚಾರ ಗೊತ್ತಾಯಿತು’ ಎಂದು ಅವರು ಬರೆದಿದ್ದಾರೆ.
Related Articles
Advertisement
ತರೂರ್ ಟೀಕೆ:
ಈ ವಿಚಾರ ಸಂಬಂಧ ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತರ ಕಾರ್ಯಕಾರಿ ಸಮಿತಿಯಲ್ಲಿ ಕೆಲಸ ಮಾಡಿದ ರಾಷ್ಟ್ರಕ್ಕೆ ಇಂಥ ಒಂದು ಬೆಳವಣಿಗೆ ಅವಮಾನ ಎಂದು ಹೇಳಿದ್ದಾರೆ. ದೇಶಕ್ಕೆ ಒಂದು ಹೆಮ್ಮೆಯ ಮಾನವೀಯತೆಯ ಇತಿಹಾಸ ಇದೆ. ಅದಕ್ಕೆ ಕೇಂದ್ರ ಸರ್ಕಾರ ಚ್ಯುತಿ ತರುವ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದಾರೆ.