Advertisement

Delhi Excise Policy Case: ಕೊನೆಗೂ ಮನೀಶ್ ಸಿಸೋಡಿಯಾಗೆ ಸಿಕ್ತು ಷರತ್ತು ಬದ್ದ ಜಾಮೀನು…

11:28 AM Aug 09, 2024 | Team Udayavani |

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 9) ಜಾಮೀನು ಮಂಜೂರು ಮಾಡಿದೆ.

Advertisement

ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26, 2023 ರಂದು ಸಿಬಿಐ ಬಂಧಿಸಿತು, ಎರಡು ವಾರಗಳ ನಂತರ ಇಡಿ ಅವರನ್ನು ಬಂಧಿಸಿತು. ಈಗ ಅವರು ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ. ಇದರೊಂದಿಗೆ ಕಳೆದ 17 ತಿಂಗಳ ಬಳಿಕ ಸಿಸೋಡಿಯಾ ಜೈಲಿನಿಂದ ಹೊರಬರುವಂತಾಗಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಸಿಸೋಡಿಯಾ ಅವರಿಗೆ 10 ಲಕ್ಷದ ಜಾಮೀನು ಬಾಂಡ್ ಜೊತೆಗೆ ಇಬ್ಬರು ಶ್ಯೂರಿಟಿ ನೀಡುವಂತೆ ನಿರ್ದೇಶಿಸಿದೆ, ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೊರಹೋದಂತೆ ಸೂಚಿಸಿದ್ದು ಅದಕ್ಕಾಗಿ ಅವರ ಪಾಸ್ ಪೋಸ್ಟ್ ಪೊಲೀಸ್ ಠಾಣೆಗೆ ನೀಡುವಂತೆ ಹೇಳಿದೆ, ಮತ್ತು ವಾರಕ್ಕೆ ಎರಡು ಬಾರಿ ಸೋಮವಾರ ಮತ್ತು ಗುರುವಾರ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ. ಅಲ್ಲದೆ ಸಾಕ್ಷ ನಾಶ ಮಾಡುವ ಉದ್ದೇಶದಿಂದ ಸಾಕ್ಷಿಗಳ ಮೇಲೆ ಪ್ರಭಾವ ಬಿರುವುದು ಅಥವಾ ಸಾಕ್ಷ್ಯವನ್ನು ನಾಶ ಮಾಡುವಂತಹ ಪ್ರಯತ್ನವನ್ನು ಮಾಡಬಾರದು ಎಂದು ಅದು ಹೇಳಿದೆ.

ಇದನ್ನೂ ಓದಿ: BSY ವಿರುದ್ಧ ಭ್ರಷ್ಟಾಚಾರ ಪ್ರಕರಣ: ತನಿಖೆ ಪ್ರಗತಿ ವಿವರ ಸಲ್ಲಿಸಲು ಕೋರ್ಟ್‌ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next