Advertisement

ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಪ್ರಶ್ನಿಸಿದ ಸಿಬಿಐ

03:49 PM Jun 16, 2017 | Team Udayavani |

ಹೊಸದಿಲ್ಲಿ : ಆಮ್‌ ಆದ್ಮಿ ಪಕ್ಷದ “ಟಾಕ್‌ ಟು ಎಕೆ’ ಅಭಿಯಾನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಇಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಅವರನ್ನು ಇಂದು ಶುಕ್ರವಾರ ಪ್ರಶ್ನಿಸಿತು.

Advertisement

ಸಿಬಿಐ ಅಧಿಕಾರಿಗಳು ಇಂದು ಸಿಸೋಡಿಯಾ ಅವರ ನಿವಾಸಕ್ಕೆ ತೆರಳಿ “ಟಾಕ್‌ ಟು ಎಕೆ’ ಕುರಿತು ಪ್ರಕೃತ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಪ್ರಶ್ನಿಸಿದರು ಎಂದು ಎಎನ್‌ಐ ವರದಿ ಮಾಡಿದೆ. 

ಸಿಬಿಐ ಅನಂತರ ನೀಡಿದ ಹೇಳಿಕೆಯೊಂದರಲ್ಲಿ  “ಸಿಸೋಡಿಯ ನಿವಾಸದಲ್ಲಿ ಯಾವುದೇ ಶೋಧ ಕಾರ್ಯ ನಡೆಸಲಾಗಿಲ್ಲ; ತನಿಖೆಗೆ ಸಂಬಂಧಿಸಿದ ಕೆಲವೊಂದು ವಿಷಯಗಳಿಗೆ ಸ್ಪಷ್ಟೀಕರಣವನ್ನು ಪಡೆಯಲಾಗಿದೆ’ ಎಂದು ಸ್ಪಷ್ಟಪಡಿಸಿದೆ. 

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕಳೆದ ವರ್ಷ ಜುಲೈ 17ರಂದು “ಟಾಕ್‌ ಟು ಎಕೆ’ ಎಂಬ ತಮ್ಮ ಚೊಚ್ಚಲ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಅದರಲ್ಲಿ ಕೆಲವೊಂದು ಪ್ರಕರಣಗಳ ಬಗ್ಗೆ ಚಚೆ ì ನಡೆಸಲಾಗಿತ್ತು. ಅದನ್ನು  ವೆಬ್‌ ಸೈಟಿನಲ್ಲಿ  ಲೈವ್‌ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next