Advertisement

ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ : ಭಾರತ ‘ಬಿ’ಫೈನಲಿಗೆ

05:12 PM Mar 27, 2017 | Karthik A |

ವಿಶಾಖಪಟ್ಣಣ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾರ್ಥಿವ್‌ ಪಟೇಲ್‌ ನಾಯಕತ್ವದ ಭಾರತ ‘ಬಿ’ ತಂಡವು ರವಿವಾರದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 32 ರನ್ನುಗಳಿಂದ ಸೋಲಿಸಿ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಕೆಡಹಿದ್ದ ಭಾರತ ‘ಬಿ’ ತಂಡವು ದ್ವಿತೀಯ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ. ಎರಡೂ ಪಂದ್ಯಗಳಲ್ಲಿ ಭಾರತ ‘ಬಿ’ ಮುನ್ನೂರು ಪ್ಲಸ್‌ ರನ್‌ ಪೇರಿಸಿದ ಸಾಧನೆ ಮಾಡಿದೆ. ಫೈನಲ್‌ ಪಂದ್ಯ ಮಾ. 29ರಂದು ನಡೆಯಲಿದೆ. ಸೋಮವಾರ ಭಾರತ ‘ಎ’ ತಂಡವು ತಮಿಳುನಾಡು ತಂಡವನ್ನು ಎದುರಿಸಲಿದ್ದು ಈ ಪಂದ್ಯದ ವಿಜೇತರು ಫೈನಲಿನಲ್ಲಿ ಭಾರತ ‘ಬಿ’ ತಂಡವನ್ನು ಎದುರಿಸಲಿದೆ.

Advertisement

ಮನೀಷ್‌ ಪಾಂಡೆ ಅವರ ಶತಕ ಹಾಗೂ ಶಿಖರ್‌ ಧವನ್‌ ಮತ್ತು ಅಕ್ಷರ್‌ ಪಟೇಲ್‌ ಅವರ ಅರ್ಧ ಶತಕದಿಂದಾಗಿ ಭಾರತ ‘ಬಿ’ ತಂಡವು 8 ವಿಕೆಟಿಗೆ 316 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಭಾರತ ‘ಬಿ’ ತಂಡದ ನಿಖರ ದಾಳಿಯಿಂದಾಗಿ ತಮಿಳುನಾಡು 48.4 ಓವರ್‌ಗಳಲ್ಲಿ 284 ರನ್ನಿಗೆ ಆಲೌಟಾಯಿತು. ಮೊದಲ ಪಂದ್ಯದಲ್ಲಿ ಶಿಖರ್‌ ಧವನ್‌ ಶತಕ ಸಿಡಿಸಿದ್ದರೆ ಈ ಪಂದ್ಯದಲ್ಲಿ ಮನೀಷ್‌ ಪಾಂಡೆ ಶತಕ ಸಿಡಿಸಿ ಸಂಭ್ರಮಿಸಿದರು. ಧವನ್‌ ಮತ್ತು ಪಾಂಡೆ ದ್ವಿತೀಯ ವಿಕೆಟಿಗೆ 86 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಧವನ್‌ ಅರ್ಧಶತಕ ಸಿಡಿಸಿದರೆ ಪಾಂಡೆ 104 ರನ್‌ ಹೊಡೆದರು. 110 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿದರು. 

ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿ ಗಮನ ಸೆಳೆದರು. ನಾಲ್ಕು ಸಿಕ್ಸರ್‌ ನೆರವಿಂದ 51 ರನ್‌ ಸಿಡಿಸಿದ್ದ ಅವರು ತನ್ನ 10 ಓವರ್‌ಗಳ ದಾಳಿಯಲ್ಲಿ 53 ರನ್ನಿಗೆ 3 ವಿಕೆಟ್‌ ಕಿತ್ತು ಭಾರತ ‘ಬಿ’ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು.
ಗೆಲ್ಲಲು ಕಠಿನ ಗುರಿ ಪಡೆದ ತಮಿಳುನಾಡು ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಕೌಶಿಕ್‌ ಗಾಂಧಿ ಶತಕ ಸಿಡಿಸಿದರಲ್ಲದೇ ನಾರಾಯಣ್‌ ಜಗದೀಶನ್‌ ಜತೆ ದ್ವಿತೀಯ ವಿಕೆಟಿಗೆ 114 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಜೋಡಿ ಮುರಿದ ಬಳಿಕ ತಂಡದ ರನ್‌ವೇಗ ಕುಂಠಿತಗೊಂಡಿತಲ್ಲದೇ ಆಗಾಗ್ಗೆ ವಿಕೆಟ್‌ ಕಳೆದುಕೊಂಡ ಕಾರಣ ಸೋಲು ಕಾಣುವಂತಾಯಿತು. ತಂಡದ ಅಂತಿಮ ಆರು ವಿಕೆಟ್‌ಗಳು 40 ರನ್‌ ಅಂತರದಲ್ಲಿ ಉರುಳಿದ್ದವು.

ಸಂಕ್ಷಿಪ್ತ ಸ್ಕೋರು: 
ಭಾರತ ‘ಬಿ’ 8 ವಿಕೆಟಿಗೆ 316
(ಶಿಖರ್‌ ಧವನ್‌ 50, ಮನೀಷ್‌ ಪಾಂಡೆ 104, ಅಕ್ಷರ್‌ ಪಟೇಲ್‌ 51, ಗುರುಕೀರತ್‌ ಸಿಂಗ್‌ ಮಾನ್‌ 25, ಅಕ್ಷಯ್‌ ಕರ್ಣೇವರ್‌ 28 ಔಟಾಗದೆ, ಸಾಯಿ ಕಿಶೋರ್‌ 60ಕ್ಕೆ 4)

ತಮಿಳುನಾಡು 48.4 ಓವರ್‌ಗಳಲ್ಲಿ 284 (ಕೌಶಿಕ್‌ ಗಾಂಧಿ 124, ನಾರಾಯಣ್‌ ಜಗದೀಶನ್‌ 64, ದಿನೇಶ್‌ ಕಾರ್ತಿಕ್‌ 28, ವಿಜಯ್‌ ಶಂಕರ್‌ 27, ಧವಳ್‌ ಕುಲಕರ್ಣಿ 45ಕ್ಕೆ 3, ಕುಲ್ವಂತ್‌ ಖೆಜೊÅàಲಿಯ 62ಕ್ಕೆ 2, ಚಮ ಮಿಲಿಂದ್‌ 42ಕ್ಕೆ 2, ಅಕ್ಷರ್‌ ಪಟೇಲ್‌ 53ಕ್ಕೆ 3).

Advertisement
Advertisement

Udayavani is now on Telegram. Click here to join our channel and stay updated with the latest news.

Next