Advertisement

ಮಣಿಪುರ: ನಿವೃತ್ತ ಪತ್ರಕರ್ತರ ಮಾಸಿಕ ಪಿಂಚಣಿ 10,000ಕ್ಕೆ ಏರಿಕೆ

11:07 AM Mar 02, 2019 | udayavani editorial |

ಇಂಫಾಲ : ಮಣಿಪುರ ಸರಕಾರ ತನ್ನ ರಾಜ್ಯದಲ್ಲಿನ  ನಿವೃತ್ತ ಪತ್ರಕರ್ತರ ಮಾಸಿಕ ಪಿಂಚಣಿಯನ್ನು ಈಗಿನ 4,000 ರೂ.ಗಳಿಂದ 10,000 ರೂ.ಗಳಿಗೆ ಏರಿಸಲು ನಿರ್ಧರಿಸಿದೆ.

Advertisement

ಮೃತ ಪರ್ತಕರ್ತರ ಮನೆಯವರಿಗೆ ನೀಡಲಾಗುವ ಮಾಸಿಕ ಕುಟುಂಬ ಪಿಂಚಣಿಯನ್ನು ಈಗಿನ 2,000 ರೂ.ಗಳಿಂದ 5,000 ರೂ.ಗೆ ಏರಿಸಲು ಸರಕಾರ ನಿರ್ಧರಿಸಿದೆ.  

ಇದೇ ವೇಳೆ ದುರದೃಷ್ಟಕರ ಘಟನೆಗಳಲ್ಲಿ ಮೃತಪಡುವ ಪತ್ರಕರ್ತರ ಮನೆಯವರಿಗೆ ನೀಡುವ ಪರಿಹಾರ ಮೊತ್ತವನ್ನು ಈಗಿನ ಎರಡು ಲಕ್ಷದಿಂದ ಐದು ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ. 

ರಾಜ್ಯದಲ್ಲಿ ಪತ್ರಕರ್ತರ ನಿವೃತ್ತಿ ವಯಸ್ಸು 60 ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next