Advertisement

Manipur ವಿದ್ಯಾರ್ಥಿಗಳ ಹತ್ಯೆ: ನಾಲ್ವರು ಆರೋಪಿಗಳ ಬಂಧನ: ಸಿಎಂ ಬಿರೇನ್ ಸಿಂಗ್

11:22 PM Oct 01, 2023 | Team Udayavani |

ಇಂಫಾಲ್: ಚುರಾಚಂದ್‌ಪುರ ಜಿಲ್ಲೆಯಿಂದ ಅಪಹರಣಕ್ಕೊಳಗಾದ ಇಬ್ಬರು ವಿದ್ಯಾರ್ಥಿಗಳ ಸಾವಿನ ಹಿಂದಿನ ನಾಲ್ವರು ಮುಖ್ಯ ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಭಾನುವಾರ ಘೋಷಿಸಿದ್ದಾರೆ.

Advertisement

ಇಬ್ಬರು ವಿದ್ಯಾರ್ಥಿಗಳಾದ ಫಿಜಾಮ್ ಹೆಮ್‌ಜಿತ್ (20) ಮತ್ತು ಹಿಜಾಮ್ ಲಿಂತೋಯಿಂಗಂಬಿ (17) ಸೆ. 25 ರಂದು ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಹತ್ಯೆ ವಿಚಾರ ಬೆಳಕಿಗೆ ಬಂದಿತ್ತು.

ಹತ್ಯೆಯ ಹಿಂದಿನ ಅಪರಾಧಿಗಳಿಗೆ “ಮರಣ ದಂಡನೆ ಸೇರಿದಂತೆ ಗರಿಷ್ಠ ಶಿಕ್ಷೆ” ನೀಡಲಾಗುತ್ತದೆ ಎಂದು ರಾಜ್ಯ ಸರಕಾರ ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹತ್ಯೆಯ ತನಿಖೆಗೆ ವಿಶೇಷ ನಿರ್ದೇಶಕರ ನೇತೃತ್ವದ ಕೇಂದ್ರೀಯ ತನಿಖಾ ದಳದಿಂದ ತಂಡವನ್ನು ಕಳುಹಿಸಿದ ಕೆಲವು ದಿನಗಳ ನಂತರ ಭಾನುವಾರ ಪ್ರಗತಿ ಕಂಡುಬಂದಿದೆ. ಕೆಲವು ದಿನಗಳಿಂದ ಇಲ್ಲಿಯೇ ಮೊಕ್ಕಾಂ ಹೂಡಿದ್ದು, ಭಾರತೀಯ ಸೇನೆ, ಅರೆಸೇನಾ ಪಡೆ, ಅಸ್ಸಾಂ ರೈಫಲ್ಸ್ ಹಾಗೂ ರಾಜ್ಯ ಪೊಲೀಸರ ಬೆಂಬಲದೊಂದಿಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇದೊಂದು ದೊಡ್ಡ ಸಾಧನೆ’ ಎಂದು ಸಿಎಂ ಹೇಳಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ಪಿತೂರಿ ನಡೆಸಿದ ವ್ಯಕ್ತಿ ಬಂಧನ

Advertisement

ಏತನ್ಮಧ್ಯೆ, ಕೇಂದ್ರ ಸರಕಾರದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಅಶಾಂತಿಯನ್ನು ಬಳಸಿಕೊಳ್ಳುವ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಚುರಾಚಂದ್‌ಪುರದ ಸೀಮಿನ್‌ಲುನ್ ಗ್ಯಾಂಗ್ಟೆ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳು ಈ ಸಂಚಿನ ಹಿಂದೆ ಇದ್ದಾರೆ ಎಂದು ಎನ್ಐಎ ಹೇಳಿದೆ.

ಭಯೋತ್ಪಾದಕ ಗುಂಪುಗಳು ಮಣಿಪುರದಲ್ಲಿ ಜನಾಂಗೀಯ ಅಶಾಂತಿಯನ್ನು ಬಳಸಿಕೊಳ್ಳುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಸಂಚು ಮಾಡಲು ಬಯಸುತ್ತಿವೆ ಎಂದು ತನಿಖಾ ಸಂಸ್ಥೆ ಸೇರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next