ಇಂಫಾಲ: ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಇಂಡಿಯಾ ಟುಡೇ ನಾರ್ತ್ ಈಸ್ಟ್ ಶುಕ್ರವಾರ ವರದಿ ಮಾಡಿದೆ.
ಗಾಯಕ ಅಖು, ಆತನ ಹೆಂಡತಿ ಮತ್ತು ತಾಯಿಯ ಹಣೆಗೆ ಬಂದೂಕು ಇಟ್ಟ ಬಂಧೂಕುಧಾರಿಗಳು ಗಾಯಕನನ್ನು ಅಪಹರಿಸಿರುವುದಾಗಿ ಗಾಯಕನ ಪತ್ನಿ ಹೇಳಿಕೊಂಡಿದ್ದಾರೆ ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಖು ಚಿಂಗಾಂಗ್ಬಾಮ್ ಇಂಫಾಲ್ ಮೂಲದ ಖುರೈ ಮೂಲದವರು ಎನ್ನಲಾಗಿದ್ದು, ಖ್ಯಾತ ಗಾಯಕ, ಗೀತರಚನೆಕಾರರಾಗಿದ್ದಾರೆ. ಅಲ್ಲದೆ ‘ಇಂಫಾಲ್ ಟಾಕೀಸ್’ ಎಂಬ ಜಾನಪದ ರಾಕ್ ಬ್ಯಾಂಡ್‌ನ ಸಂಸ್ಥಾಪಕರೂ ಕೂಡ ಆಗಿದ್ದಾರೆ.
ಮಣಿಪುರದಲ್ಲಿ ಮೇ 3ರಲ್ಲಿ ಮೈಟೀಸ್ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಘರ್ಷಣೆಯ ಬಳಿಕ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು ಈ ಘರ್ಷಣೆಯಲ್ಲಿ ಹಲವು ಮಂದಿ ಸಾವನ್ನಪಿದ್ದಾರೆ ಇದರ ನಡುವೆ ಗಾಯಕನ ಅಪಹರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: JDU ಅಧ್ಯಕ್ಷ ಸ್ಥಾನಕ್ಕೆ ಲಾಲನ್ ಸಿಂಗ್ ರಾಜೀನಾಮೆ… ನಿತೀಶ್ ಕುಮಾರ್ ಗೆ ಅಧ್ಯಕ್ಷ ಪಟ್ಟ