Advertisement
ನಮೋ ಬ್ರಿಗೇಡ್ 2.0 ವತಿಯಿಂದ ಡೊಂಗರ ಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ನಡೆದ “ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ’ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ|ಊರ್ಮಿಕಾ ಮಯ್ಬಾಮಾ ಅವರು ಮಾತನಾಡಿ ಮೈತೇಯಿ ಸಮುದಾಯದ ಬಳಿ ಹಣ, ಸಂಪತ್ತು ಇಲ್ಲ. 2011ರ ಜನಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯ ದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ ಎಂದರು.
Related Articles
Advertisement
ಶೇ. 10ರಷ್ಟು ಬಯಲು ಪ್ರದೇಶದಲ್ಲಿ ಮಾತ್ರ ಮೈತೇಯಿಗಳು ಹಾಗೂ ಇತರ ಸಮುದಾಯ ನೆಲೆಸಿದ್ದರೆ ಮಣಿಪುರದ ಉಳಿದ ಶೇ. 90ರಷ್ಟು ಭೂಭಾಗವಾದ ಗುಡ್ಡಗಳಲ್ಲಿ ಕುಕಿಗಳಿದ್ದಾರೆ. ಭೂ ಸುಧಾರಣ ಕಾಯಿದೆಯ ಪ್ರಕಾರ ಮೈತೇಯಿಗಳು ಗುಡ್ಡಗಾಡು ಪ್ರದೇಶದಲ್ಲೆಲ್ಲೂ ನೆಲೆಸುವಂತಿಲ್ಲ, ಅಲ್ಲಿ ನೆಲೆಸಿದವರ ಮೇಲೆ ನಿರಂತರ ಹಲ್ಲೆ ನಡೆದಿದೆ ಎಂದರು.
ಭಾರತಿ ಸಂಜಯ್ ಪ್ರಭು ಸ್ವಾಗತಿಸಿ ಪ್ರಸ್ತಾವಿಸಿದರು. ಗೋಪಾಲಕೃಷ್ಣ ಭಟ್ ಪ್ರಾರ್ಥಿಸಿದರು. ಅರುಣ್ ಜಿ. ಶೇಟ್ ನಿರೂಪಿಸಿ ವಂದಿಸಿದರು.