Advertisement

Manipur; ಶಾಂತಿ ಸ್ಥಾಪನೆಗೆ ಕೇಂದ್ರಕ್ಕೆ ಮೊರೆ

01:27 AM Sep 09, 2024 | Team Udayavani |

ಇಂಫಾಲ್‌: ಗಲಭೆ ಪೀಡಿತ ಮಣಿಪುರದಲ್ಲಿ ಮೈತೇಯಿ ಸಮುದಾಯ ಮತ್ತು ಕುಕಿ ಬಂಡುಕೋರರ ನಡುವಿನ ಸಂಘರ್ಷವು ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಸತತ ಡ್ರೋನ್‌, ರಾಕೆಟ್‌ ದಾಳಿಯ ಬೆನ್ನಲ್ಲೇ ಶನಿವಾರ ಮುಂಜಾನೆ ನಡೆದ ಹಿಂಸಾಚಾರದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ, ಶಾಂತಿ ಪುನಃಸ್ಥಾಪನೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲು ಮುಂದಾಗಿವೆ.

Advertisement

ಅದರಂತೆ, ಮಣಿಪುರ ಸಿಎಂ ಬಿರೇನ್‌ ಸಿಂಗ್‌ ಮತ್ತು ಆಡಳಿತಾರೂಢ ಬಿಜೆಪಿ ಹಾಗೂ ಮಿತ್ರಪಕ್ಷ ಗಳ ಕೆಲವು ಶಾಸಕರು ಕೇಂದ್ರ ಸರಕಾರಕ್ಕೆ 8 ಅಂಶಗಳ ಕೋರಿಕೆಯುಳ್ಳ ಪಟ್ಟಿ ಸಲ್ಲಿಸಿದ್ದಾರೆ. ರಾಜ್ಯದ ಭದ್ರತಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಯುನಿಫೈಡ್‌ ಕಮಾಂಡ್‌ನ‌ ನಿಯಂತ್ರಣ ಅಧಿಕಾರವನ್ನು ಸರಕಾರಕ್ಕೆ ನೀಡಬೇಕು, ಕೇಂದ್ರ, ರಾಜ್ಯ ಮತ್ತು ಕುಕಿ ಬಂಡುಕೋರರ ನಡುವೆ ನಡೆದ ತ್ರಿಪಕ್ಷೀಯ ಒಪ್ಪಂದ ರದ್ದು ಮಾಡಬೇಕು, ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು, ಗಡಿ ಬೇಲಿ ಹಾಕುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬಿತ್ಯಾದಿ ಒಳಗೊಂಡ ಬೇಡಿಕೆಯನ್ನು ರಾಜ್ಯಪಾಲ ಲಕ್ಷ್ಮಣ್‌ ಪ್ರಸಾದ್‌ ಆಚಾರ್ಯಗೆ ಸಲ್ಲಿಕೆ ಮಾಡಿದ್ದಾರೆ.

ಡ್ರೋನ್‌ ನಿಗ್ರಹ ವ್ಯವಸ್ಥೆ: ಬಂಡುಕೋರರು ಡ್ರೋನ್‌, ರಾಕೆಟ್‌ ಮೂಲಕ ದಾಳಿ ಆರಂಭಿಸಿರುವ ಹಿನ್ನೆಲೆಯಲ್ಲಿ ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಸೇನಾ ಕಾಪ್ಟರ್‌ಗಳೂ ಗಸ್ತು ತಿರುಗಲಾರಂಭಿಸಿವೆ. ಅನುಮಾನಾಸ್ಪದ ಪ್ರದೇಶಗಳಲ್ಲಿ ಕೂಂಬಿಂಗ್‌ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಗುರುತಿಸಲೆಂದೇ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next