Advertisement

Manipal: ಯುವತಿ ನೇಣುಬಿಗಿದು ಆತ್ಮಹತ್ಯೆ

12:24 AM Jan 29, 2024 | Team Udayavani |

ಮಣಿಪಾಲ: ಮನನೊಂದು ಹೊಟೇಲ್‌ ವೈಟರ್‌ ಕೆಲಸ ಮಾಡಿಕೊಂಡಿದ್ದ ಯುವತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಮಣಿಪಾಲದ ಹೊಟೇಲ್‌ವೊಂದರಲ್ಲಿ ವೈಟರ್‌ ಕೆಲಸ ಮಾಡಿಕೊಂಡಿದ್ದ ಪ್ರಣೀತಾ ಮರಾಕ್‌ (26) ಆತ್ಮಹತ್ಯೆ ಮಾಡಿಕೊಂಡವರು.

ಜ. 24ರಂದು ಸಂಜೆ ಯಾವುದೋ ಕಾರಣಕ್ಕೆ ಮನನೊಂದು ಹೊಟೇಲ್‌ನ ಸ್ಟಾಫ್ ರೂಮ್‌ನ ಕಿಟಕಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದರು. ಬಳಿಕ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಜ.27ರಂದು ಸಾವನ್ನಪ್ಪಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next