Advertisement

ಮಣಿಪಾಲ ವಿ.ವಿ.ಗೆ ಇಬ್ಬರು ಸಹಕುಲಪತಿಗಳು

09:52 AM Mar 31, 2017 | Team Udayavani |

ಉಡುಪಿ: ಮಣಿಪಾಲ ವಿ.ವಿ.ಗೆ ಹೊಸಧಿದಾಗಿ ಇಬ್ಬರು ಸಹ ಕುಲಪತಿಗಳನ್ನು ನೇಮಿಸಲಾಗಿದೆ. ಮಣಿಪಾಲ ಕೆಎಂಸಿ ಡೀನ್‌ ಡಾ| ಪೂರ್ಣಿಮಾ ಬಾಳಿಗ ಅವರನ್ನು ಆರೋಗ್ಯ ವಿಜ್ಞಾನ ವಿಭಾಗಕ್ಕೆ, ಎಂಐಟಿ ನಿರ್ದೇಶಕ ಡಾ| ಗೋಪಾಲಕೃಷ್ಣ ಪ್ರಭು ಅವರನ್ನು ತಾಂತ್ರಿಕ ಮತ್ತು ನಿರ್ವಹಣೆ ವಿಭಾಗಕ್ಕೆ ಸಹಕುಲಪತಿಗಳನ್ನಾಗಿ ನಿಯೋಜಿಸಲಾಗಿದೆ. 

Advertisement

ವಿ.ವಿ.ಯು ಜಾಗತಿಕ ರ್‍ಯಾಂಕಿಂಗ್‌ನಲ್ಲಿ ದಾಪುಗಾಲನ್ನಿಡಲು ಪೂರಕವಾಗಿ ಹೊಸ ನೇಮಕಾತಿಗಳನ್ನು ಮಾಡಧಿಲಾಗಿದೆ. “ಕಳೆದೆರಡು ವರ್ಷಗಳಲ್ಲಿ ವಿ.ವಿ.ಯಲ್ಲಿ ಬಹಳಷ್ಟು ಬದಲಾವಣೆ ಮತ್ತು ಅಭಿವೃದ್ಧಿ ಆಗಿದೆ. ಈ ಅಭಿವೃದ್ಧಿಯನ್ನು ಕಾಪಿರಿಸಿಕೊಳ್ಳುವುದರ ಜತೆಗೆ ಮುಂದಿನ ಬೆಳವಣಿಗೆಗೆ ನೇಮಕಾತಿಗಳನ್ನು ಎ. 1ರಿಂದ ಅನ್ವಯಿಸಿ ಮಾಡಲಾಗಿದೆ’ ಎಂದು ಕುಲಪತಿ ಡಾ| ಎಚ್‌.ವಿನೋದ ಭಟ್‌ ತಿಳಿಸಿದ್ದಾರೆ. 

ಇಬ್ಬರೂ ಪ್ರಸ್ತುತ ಇರುವ ಹುದ್ದೆಗಳೊಂದಿಗೆ ಹೊಸ ಜವಾಧಿಬ್ದಾರಿಗಳನ್ನು ನಿರ್ವಹಿಸಧಿಲಿದ್ದಾರೆ. ಆರೋಗ್ಯ ವಿಜ್ಞಾನ ವಿಭಾಗಧಿದಡಿ ಮಣಿಪಾಲ, ಮಂಗಳೂರಿನ ಕೆಎಂಸಿ, ದಂತ ವಿಜ್ಞಾನ ಕಾಲೇಜು, ಮಣಿಪಾಲ ಮೆಲಕ ವೈದ್ಯಕೀಯ ಕಾಲೇಜು, ನರ್ಸಿಂಗ್‌ ಕಾಲೇಜು, ಅಪ್ಲೆ„ಡ್‌ ಹೆಲ್ತ್‌ ಸೈನ್ಸಸ್‌, ಲೈಫ್ ಸೈನ್ಸಸ್‌, ಸಮುದಾಯ ಆರೋಗ್ಯ, ಸಂಖ್ಯಾಶಾಸ್ತ್ರ, ವೈರಸ್‌ ಸಂಶೋಧನೆ, ಗ್ರಂಥಾಲಯ- ಮಾಹಿತಿ ವಿಜ್ಞಾನ ವಿಭಾಗಗಳು ಬರುತ್ತವೆ. ತಂತ್ರಜ್ಞಾನ ವಿಭಾಗದಡಿ ಎಂಐಟಿ, ಆರ್ಕಿಟೆಕ್ಚರ್‌, ಐಕಾಸ್‌, ಎಸ್‌ಒಎಂ, ವಾಗಾÏ, ಅಲೈಡ್‌ ಹಾಸ್ಪಿಟಾಲಿಟಿ ಸ್ಟಡೀಸ್‌, ಕಲಿನರಿ ಆರ್ಟ್ಸ್, ಕಾಮರ್ಸ್‌ ಮೊದಲಾದ ವಿಭಾಗಗಳು ಬರುತ್ತವೆ. 

Advertisement

Udayavani is now on Telegram. Click here to join our channel and stay updated with the latest news.

Next