Advertisement
ಎಲ್ಲೆಲ್ಲಿ ಹೊಂಡ?ಮಣಿಪಾಲದುದ್ದಕ್ಕೂ ಸೂಜಿಮೊನೆ ಇಡಲಾಗದಷ್ಟು ಹೊಂಡಗಳು ನಿರ್ಮಾಣವಾಗಿವೆ. ಹಲವು ಕಡೆ ಸರೋವರ ಸದೃಶ್ಯವಾಗಿದೆ. ಮಣಿಪಾಲದ ಸಿಂಡಿಕೇಟ್ ಸರ್ಕಲ್, ಮೋರ್ ಸ್ಟೋರ್ ಎದುರುಗಡೆ ರಸ್ತೆ, ವುಡ್‌ಲ್ಯಾಂಡ್ ಬಿಲ್ಡಿಂಗ್ ಎದುರು, ಇಂದ್ರಾಳಿ ರೈಲ್ವೇ ಸೇತುವೆಯ ಸಮೀಪದಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ.
ಮಣಿಪಾಲ ಮಲ್ಪೆ ಮಾರ್ಗದ ಸಂಚಾರ ವಾಹನ ಸವಾರರಿಗೆ ದುಸ್ತರವಾಗಿದೆ. ಉಡುಪಿ, ಮಣಿಪಾಲ, ಪರ್ಕಳ, ತೀರ್ಥಹಳ್ಳಿ ಶಿವಮೊಗ್ಗ, ಕಾರ್ಕಳ ಸೇರಿದಂತೆ ನೂರಾರು ಹಳ್ಳಿಗಳನ್ನು ಪಟ್ಟಣಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಮಾರ್ಗವಾಗಿ ಪ್ರತಿನಿತ್ಯ ಬಸ್, ಲಘು ವಾಹನಗಳು, ದ್ವಿಚಕ್ರ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಂದ ಈ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸಲು ಭಯಭೀತರಾಗಿದ್ದಾರೆ.
Related Articles
ವಾಹನ ಸವಾರರು ನಿರ್ದಿಷ್ಟ ದಿಕ್ಕಿನಿಂದ ರಾ.ಹೆ. 169ಎ ಮಾರ್ಗವಾಗಿ ಓಡಾಡುವುದು ಕಷ್ಟಕರವಾಗಿದೆ. ಹೀಗಾಗಿ ವಾಹನಗಳು, ಆಟೋಗಳು ಹೊಂಡಗಳಿಲ್ಲದ ರಸ್ತೆಯಲ್ಲಿ ಸಂಚರಿಸಲು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ನಿತ್ಯ ಜಗಳ, ತಂಟೆ ತಕರಾರುಗಳು ನಡೆಯುತ್ತಿವೆ. ಅಲ್ಲದೇ ಅಪಘಾತಗಳು ಸಂಭವಿಸುತ್ತಿದೆ. ಹೊಂಡಗಳ ರಾಶಿಯಿಂದ ವಾಹನ ಸವಾರರಿಗೆ ದೊಡ್ಡ ಸಂಕಟ ಎದುರಾಗಿದೆ. ಅಲ್ಲದೇ ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಜನರು, ಬೈಸಿಕಲ್ ಸವಾರರು ಓಡಾಡುತ್ತಾರೆ.
Advertisement
ದುರಂತದ ಸಂಕೇತ!ಮಣಿಪಾಲದ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳು ಮುಂದಾಗುವ ದುರಂತಗಳ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಎರಡು ವರ್ಷದ ಹಿಂದೆ ಮಣಿಪಾಲ ಬಸ್ ನಿಲ್ದಾಣ ಸಮೀಪ ಬೈಕ್ ಸವಾರ ಹೊಂಡಗಳನ್ನು ತಪ್ಪಿಸಲು ಹೋಗಿ ಮಗುವನ್ನು ಕಳೆದುಕೊಂಡ ಘಟನೆ ಸ್ಥಳೀಯರು ಮರೆತಿಲ್ಲ. ಇಂತಹ ಘಟನೆ ಮರುಕಳಿಸುವ ಮೊದಲು ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕಾಗಿದೆ. ಹೊಂಡ ತಪ್ಪಿಸಲು
ಹೋಗಿ ಅಪಘಾತ
ಮಣಿಪಾಲ- ಉಡುಪಿ ಮಾರ್ಗವಾಗಿ ಸಂಚರಿಸುವುದು ಕಷ್ಟವಾಗುತ್ತಿದೆ. ವಾಹನ ಸವಾರರು ರಸ್ತೆಯಲ್ಲಿನ ದೊಡ್ಡ ಹೊಂಡ ತಪ್ಪಿಸಲು ಹೋಗಿ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ.
-ಪ್ರಕಾಶ್, ವಾಹನ ಸವಾರ, ಮಣಿಪಾಲ ಚಿತ್ರ: ಆಸ್ಟ್ರೋಮೋಹನ್