Advertisement

ಮಣಿಪಾಲ: ಆನ್‌ಲೈನ್‌ ತರಗತಿ ಆರಂಭ 

12:32 PM Feb 21, 2017 | Team Udayavani |

ಉಡುಪಿ: ಮಣಿಪಾಲ ವಿ.ವಿ. ತರಗತಿ ಕೋಣೆಗೆ ತಂತ್ರಜ್ಞಾನ ಬಳಸುವ ನೂತನ ಕ್ರಮ  ಜಾರಿಗೆ ತಂದಿದೆ. ಮಣಿಪಾಲ ಎಂಐಟಿಯ ಸರ್‌ ಎಂ.ವಿ. ಸಭಾಂಗಣದಲ್ಲಿ ಸೋಮವಾರ ಆನ್‌ಲೈನ್‌ ತರಗತಿಯನ್ನು (ವರ್ಚುವಲ್‌ ಕ್ಲಾಸ್‌ರೂಮ್‌) ಎಂಇಎಂಜಿ ಆಡಳಿತ ನಿರ್ದೇಶಕ ಮತ್ತು ಸಿಇಒ ಡಾ|ರಂಜನ್‌ ಪೈ ಉದ್ಘಾಟಿಸಿದರು.

Advertisement

ಜೈಪುರ, ಸಿಕ್ಕಿಂ, ದುಬಾೖಯಲ್ಲಿರುವ ಮಣಿಪಾಲ ಸಮೂಹದ ಕ್ಯಾಂಪಸ್‌ಗಳಲ್ಲಿಯೂ ಇದನ್ನು ಸಂಯೋಜಿಸಲಾಗುತ್ತದೆ ಎಂದು ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ತಿಳಿಸಿದರು. ಈ ತಂತ್ರಜ್ಞಾನ ಬೋಧನಾ ಶೈಲಿಯನ್ನೇ ಬದಲಾಯಿಸಲಿದೆ ಎಂದು ಅವರು ಹೇಳಿದರು. 

ನಮ್ಮ ಸಹಸಂಸ್ಥೆಗಳೂ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶಗಳಿವೆ ಎಂದು ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಹೇಳಿದರು. ಆನ್‌ಲೈನ್‌ ತರಗತಿಯಲ್ಲಿ ಪರಸ್ಪರ ಸಂವಹನವೂ ಸಾಧ್ಯ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಮುಖ್ಯ ಮಾಹಿತಿ ಅಧಿಕಾರಿ ಬಾಲಕೃಷ್ಣ ರಾವ್‌ ಬೆಂಗಳೂರಿನಿಂದ ಸಂವಹನದಲ್ಲಿ ತಿಳಿಸಿದರು.

ವಿದ್ಯಾರ್ಥಿಗಳು ಯಾವುದೇ ಸ್ಥಳದಿಂದಲೂ ಯಾವುದೇ ಸಮಯದಲ್ಲಿ ತರಗತಿಯ ಲಾಭ ಪಡೆಯಬಹುದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ಸಹಾಯಕ ನಿರ್ದೇಶಕ ಸತೀಶ ಕಾಮತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next