Advertisement

ಮಣಿಪಾಲದ ಬಾರ್‌ನಲ್ಲಿ ಜಟಾಪಟಿ: ದೂರು-ಪ್ರತಿದೂರು ದಾಖಲು

10:08 PM Feb 11, 2023 | Team Udayavani |

ಉಡುಪಿ: ಬಾರ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ದೂರು ಪ್ರತಿದೂರು ದಾಖಲಾಗಿದೆ.

Advertisement

ಕಿನ್ನಿಮೂಲ್ಕಿಯ ಗೋಪಾಲ ಸಿ.ಶೆಟ್ಟಿ ಅವರು ತನ್ನ ಸ್ನೇಹಿತ ಅಮಯ ಶೆಟ್ಟಿ ಅವರೊಂದಿಗೆ ಮಣಿಪಾಲದ ಬಾರ್‌ವೊಂದರಲ್ಲಿ ನಿಂತು ಮಾತನಾಡುತ್ತಿದ್ದಾಗ ಇವರ ಪರಿಚಯದ ಗಣೇಶ್‌ ರಾವ್‌ ಅವರು ಗೋಪಾಲ ಶೆಟ್ಟಿ ಯವರನ್ನು ಕಂಡು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಏಕಾಏಕಿ ಬಿಯರ್‌ ಮಗ್‌ ನಿಂದ ಗೋಪಾಲ ಶೆಟ್ಟಿ ಅವರ ತಲೆಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆಯನ್ನು ತಡೆಯಲು ಬಂದ ಅಮಯ ಶೆಟ್ಟಿ ಯವರ ಬಲ ಕೈಗೆ ಗ್ಲಾಸ್‌ ತಾಗಿ ಗಾಯ ಉಂಟಾಗಿದೆ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಪಾಲ ಶೆಟ್ಟಿ ಅವರು ತನಗೆ ಹಲ್ಲೆ ಮಾಡಿದ್ದು, ಈ ವೇಳೆ ಅವರಿಗೆ ಗಾಯ ಉಂಟಾಗಿದೆ ಎಂದು ಗಣೇಶ್‌ ರಾವ್‌ ಪ್ರತಿದೂರು ದಾಖಲಿಸಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಮ್ಮ ಮೈತ್ರಿ ಸರಕಾರ ನ್ಯಾಯಸಮ್ಮತವಾಗಿದ್ದು, ಅವಧಿ ಪೂರೈಸುತ್ತದೆ: ಫಡ್ನವೀಸ್

Advertisement

Udayavani is now on Telegram. Click here to join our channel and stay updated with the latest news.

Next