Advertisement

Manipal: ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಗೆ ಧಕ್ಕೆ ಸಲ್ಲದು: ಸ್ಪೀಕರ್‌ ಯು. ಟಿ. ಖಾದರ್‌

01:32 AM Aug 01, 2024 | Team Udayavani |

ಮಣಿಪಾಲ: ಕೇರಳದಲ್ಲಿ ಸಂಭವಿಸಿದ ದುರಂತ ತೀವ್ರ ನೋವು ತಂದಿದೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಗೆ ಸಮಸ್ಯೆ ತಂದೊಡ್ಡದಂತೆ ಎಚ್ಚರ ವಹಿಸುವುದು ಅಗತ್ಯವಿದೆ ಮತ್ತು ದುರ್ಘ‌ಟನೆಗಳ ತಡೆಗೆ ಅಗತ್ಯ ಮುನ್ನೆಚ್ಚರಿಕೆಯೂ ಬೇಕು ಎಂದು ವಿಧಾನಸಭೆ ಸ್ಪೀಕರ್‌ ಯು. ಟಿ. ಖಾದರ್‌ ಹೇಳಿದ್ದಾರೆ.

Advertisement

ಮಣಿಪಾಲದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕೃತಿಗೆ ಪೂರಕವಾಗಿ ಮನುಷ್ಯರು ಬದುಕಬೇಕು. ನಿಸರ್ಗಕ್ಕೆ ವಿರುದ್ಧವಾಗಿ ಸರಕಾರದ ರೀತಿನೀತಿಗಳು ಇರಬಾರದು ಎಂದರು.

ಅಧಿಕೃತ ಸ್ಥಾನಮಾನಕ್ಕಾಗಿ ಕ್ರಮ : ತುಳುವಿಗೆ ರಾಜ್ಯದ ಎರಡನೇ ಅಧಿ ಕೃತ ಭಾಷಾ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುಳುನಾಡಿನ ಸಂಸ್ಕೃತಿ, ಭಾಷೆ, ಜನರ ಪ್ರೀತಿ ವಿಶ್ವಾಸ ಜಗದಗಲ ವಿಸ್ತರಿಸಬೇಕು ಎಂದರು. ಪಡುಬಿದ್ರಿಯಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಒಂದಿಷ್ಟು ಉದ್ಯೋಗ, ಅಭಿವೃದ್ಧಿ ಸಾಧ್ಯವಾಗಿದೆ. ಪರಿಸರ ಮಾಲಿನ್ಯವಾಗದಂತೆ ಉದ್ಯಮ, ಪ್ರಗತಿ ಸಾಧನೆಯಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next