ಉಡುಪಿ: ಯುಎಸ್‌ಎಯ ರೋಚೆಸ್ಟರ್‌ನ ಆಕ್ಲಂಡ್ ವಿಶ್ವ ವಿದ್ಯಾನಿಲಯದಲ್ಲಿ ಇತ್ತೀಚೆಗೆ ಜರ ಗಿದ ವಾರ್ಷಿಕ ಇಂಟೆಲಿಜೆಂಟ್ ಗ್ರೌಂಡ್ ವೆಹಿಕಲ್ ಸ್ಪರ್ಧೆಯಲ್ಲಿ ಮಣಿಪಾಲದ ಎಂಐಟಿ ಪ್ರಾಜೆಕ್ಟ್ ಮಾನಸ್ ತಂಡದ “ಸೋಲೋ’ ಹೆಸರಿನ ರೋಬೊಟ್ ವಾಹನ ಪ್ರಥಮ ಸ್ಥಾನ ಪಡೆದಿದೆ. ಸ್ಪರ್ಧೆಯಲ್ಲಿ ಐಐಟಿ ಮದ್ರಾಸ್, ಖರಗ್‌ಪುರ್, ಭಾರತದ ಡಿಟಿಯು ಇತರ ತಂಡಗಳು ಸಹಿತ ಒಟ್ಟು 35 ತಂಡಗಳು ಭಾಗವಹಿಸಿದ್ದವು.
ಮಾನಸ್ ತಂಡವು 3,800 ಡಾಲರ್ ಅನ್ನು ಗೆದ್ದಿದೆ. ಜತೆಗೆ ಇಂಟ್ರೋ ಪರ್ಯಾಬಿಲಿಟಿಯಲ್ಲಿ ಪ್ರಥಮ, ವಿನ್ಯಾಸ ವಿಭಾಗದಲ್ಲಿ ದ್ವಿತೀಯ ಹಾಗೂ ಸೈಬರ್ ಭದ್ರತೆಯಲ್ಲಿ ಆರನೇ ಬಹುಮಾನ ಗಳಿಸಿದೆ.
ಸಿದ್ದಾರ್ಥ ವೆಂಕಟ್ರಮಣ, ಶ್ರೀಜಿತ್ ಸಿಂಗ್ ನೇತೃತ್ವದ ತಂಡದಲ್ಲಿ ಆರ್ಯ ಕರಾನಿ, ಅನ್ಸೆಲ್ ಡಯಾಸ್, ರಕ್ಷಿತ್ ಜೈನ್, ಶಿವೇಶ್ ಕೈಟನ್, ಧೀರಜ್ ಮೋಹನ್, ಶರತ್‌ಕೃಷ್ಣನ್ ರಮೇಶ್, ಅನಿರುದ್ಧ್ ಕಶ್ಯಪ್, ನಿಶಾನ್ ಡಿ’ ಅಲ್ಮೇಡಾ, ಗೋಕುಲ್ ಪಿ. ಮತ್ತು ತನ್ಯಾ ಮಂಡೆ ಭಾಗವಹಿಸಿದ್ದರು. ಎಂಐಟಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಆಶಾಲತಾ ನಾಯಕ್ ಮಾರ್ಗದರ್ಶನ ನೀಡಿದ್ದರು.
ಮುಂದೆ ಇನ್ನೂ ಉತ್ತಮ ಪ್ರದರ್ಶನ
ಎರಡನೇ ಬಾರಿಗೆ ಈ ತಂಡವು ಪ್ರದರ್ಶನ ನೀಡಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡಿದರು. ಇದೊಂದು ಒಳ್ಳೆಯ ಅನುಭವವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಉತ್ತಮ ಪ್ರದರ್ಶನ ನೀಡಲಿದ್ದಾರೆ.
-ಡಾ| ಶ್ರೀಕಾಂತ್ ರಾವ್ ನಿರ್ದೇಶಕರು ಎಂಐಟಿ