Advertisement

ಮಣಿಪಾಲ ಎಂಐಸಿ: ಆನ್‌ಲೈನ್‌ ”ಸಬ್ಕಾ ಚಾವಲ್‌”ಅಭಿಯಾನದ ಸಮಾರೋಪ

11:59 PM Nov 05, 2019 | mahesh |

ಉಡುಪಿ: ಮಣಿಪಾಲದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ನ (ಎಂಐಸಿ) ಪ್ರಥಮ ವರ್ಷದ ವಿದ್ಯಾರ್ಥಿಗಳು ಆಹಾರ ಪೋಲು ತಡೆಗಟ್ಟುವ ವಿರುದ್ಧ ಹಮ್ಮಿಕೊಂಡ “ಸಬ್ಕಾ ಚಾವಲ್‌’ಎಂಬ ಆನ್‌ಲೈನ್‌ ಅಭಿಯಾನದ ಸಮಾರೋಪ ಸಮಾರಂಭ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Advertisement

ಮಾಹೆ ವಿ.ವಿ. ಪರಿಸರ ಸುಸ್ಥಿರತೆ ವಿಭಾಗದ ಸಹಾಯಕ ನಿರ್ದೇಶಕ ಡೆರಿಕ್‌ ಇಯಾನ್‌ ಜೋಶುವಾ ಮಾತನಾಡಿ, ಮಾಹೆ ನೀರು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಆಳವಡಿಸಿಕೊಂಡಿದೆ. ಇದರ ಪರಿಣಾಮವಾಗಿ ಮಾಹೆ ಹಸಿರು ಕ್ಯಾಂಪಸ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕಾಗಿ ಹಲವಾರು ಪ್ರಶಸ್ತಿಗಳು ಬಂದಿವೆ. ಕ್ಯಾಂಪಸ್‌ ಕ್ಯಾಂಟೀನ್‌ ಸಮೀಪದಲ್ಲಿ ವ್ಯರ್ಥವಾದ ಆಹಾರ ಹಾಕಲು ಡಬ್ಬಿಯನ್ನು ಇಡಲಾಗಿದೆ. ವಿದ್ಯಾರ್ಥಿಗಳ ವ್ಯಯಿಸಿದ ಆಹಾರವನ್ನು ಆ ಡಬ್ಬಿಗೆ ಹಾಕುತ್ತಾರೆ. ಅದನ್ನು ನಿತ್ಯ ಪ್ರಾಣಿ ಸಾಕಣಿಕೆಯಲ್ಲಿ ತೊಡಗಿಸಿಕೊಂಡವರು ಬಂದು ತೆಗೆದುಕೊಂಡು ಹೋಗುತ್ತಾರೆ. ಇದರಿಂದಾಗಿ ಮಾಹೆ ಪರಿಸರ ಅತ್ಯಂತ ಸುಂದರ, ಸ್ವತ್ಛವಾಗಿದೆ. ಎಂಐಸಿ ವಿದ್ಯಾರ್ಥಿಗಳು ಆಹಾರ ಸಂರಕ್ಷಣೆಗಾಗಿ ಹಮ್ಮಿಕೊಂಡ ಅಭಿಯಾನ ಶ್ಲಾಘನೀಯ ಎಂದರು. ಎಂಐಸಿಯ ನಿರ್ದೇಶಕಿ ಡಾ| ಪದ್ಮಾರಾಣಿ ಅವರು ಆಹಾರದ ಮಹತ್ವ ಹಾಗೂ ಆಹಾರ ಪೋಲು ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿನಿ ಮೃದುಲಾ ಸ್ವಾಗತಿಸಿದರು, ಕೇಯೂರಿ ದೇಸಾಯಿ ಅಭಿಯಾನದ ಕುರಿತು ಮಾಹಿತಿ ನೀಡಿದರು. ತೇಜಸ್ವಿ ಶ್ರೀನಿವಾಸ್‌ ವಂದಿಸಿದರು. ಅಭಿಯಾನದ ಅಂಗವಾಗಿ ನಿರ್ಮಿಸಿದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next