Advertisement
ಕಳೆದ ಶುಕ್ರವಾರ ರಾತ್ರಿ ಪೆರಂಪಳ್ಳಿಯ ಮನೆಯ ಆವರಣದೊಳಗೆ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಸೋಮ ವಾರ ತಡರಾತ್ರಿ ಅನಂತ ನಗರ, ಸಿಂಡಿಕೇಟ್ ವೃತ್ತ, ಎಂಡ್ ಪಾಯಿಂಟ್ ಪ್ರದೇಶಗಳಲ್ಲಿ ಚಿರತೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ.
Related Articles
Advertisement
ರಾತ್ರಿ ಓಡಾಡಲು ಭಯಮಣಿಪಾಲದ ಮುಖ್ಯರಸ್ತೆಯ ಆಸು ಪಾಸಿನಲ್ಲಿಯೇ ಚಿರತೆ ಕಾಣಿಸಿ ಕೊಂಡಿರುವುದರಿಂದ ರಾತ್ರಿ ವೇಳೆ ಮಣಿಪಾಲ ಪರಿಸರದಲ್ಲಿ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣಗೊಂಡಿದ್ದು, ಹೊಟೇಲ್ ಕಾರ್ಮಿಕರು ಸಹಿತ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳು ಕೆಲಸ ಮುಗಿಸಿ ಮನೆ ಕಡೆಗೆ ತೆರಳಲು ಆತಂಕಪಡುವಂತಾಗಿದೆ. ನಾಯಿಗಳಿಗೆ ಹೊಂಚು ಹಾಕುವ ಚಿರತೆ
ನಗರ ಭಾಗಕ್ಕೆ ಚಿರತೆಗಳು ಯಾಕೆ ಆಗಮಿಸುತ್ತಿವೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಸಣ್ಣಪುಟ್ಟ ಕಾಡಿನಲ್ಲಿ ಚಿರತೆಗೆ ಬೇಕಾದ ಆಹಾರ ಕಡಿಮೆಯಾಗಿದ್ದು, ಇದು ನಾಡಿನತ್ತ ವಲಸೆ ಬರಲು ಕಾರಣವಾಗುತ್ತಿದೆ. ಸುಲಭವಾಗಿ ಸಿಗುವ ಕೋಳಿ, ನಾಯಿಗಳನ್ನು ಹುಡುಕಿಕೊಂಡು ಚಿರತೆ ಬರುತ್ತಿದೆ. ಅದರಲ್ಲಿಯೂ ಮಣಿಪಾಲದಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಎಂಡ್‌ಪಾಯಿಂಟ್ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳ ಬಾಯಿಗೆ ಆಹಾರವಾಗುತ್ತಿದೆ ಎಂಬುದು ಅರಣ್ಯ ಇಲಾಖೆ ಸಿಬಂದಿ ಅಭಿಪ್ರಾಯ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯೂ ಮುಂದಾಗಬೇಕಾದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು. ಚಿರತೆ ನೋಡಿ ಬೆಚ್ಚಿದ ಕಾರ್ಮಿಕರು
ಅನಂತನಗರ ಸಮೀಪದ ಹೊಟೇಲ್ ಒಂದರಲ್ಲಿ ತಡರಾತ್ರಿ ಕರ್ತವ್ಯ ಮುಗಿಸಿ ರೂಮ್ ಕಡೆಗೆ ಸಾಗುತ್ತಿದ್ದ ಕಾರ್ಮಿಕರು ಚಿರತೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಚಿರತೆ ರಸ್ತೆಯಲ್ಲಿ ಹೋಗುತ್ತಿರುವುದು ಕಂಡು ಹೆದರಿದ ಕಾರ್ಮಿಕರು, ಕೆಲವರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಚಿರತೆ ಪೊದೆಗಳ ಎಡೆಗೆ ಸಾಗಿ ಕಣ್ಮರೆಯಾಗಿದೆ ಎನ್ನುತ್ತಾರೆ ಕಾರ್ಮಿಕರು. ಮಣ್ಣಪಳ್ಳ ವಾಯು ವಿಹಾರಿಗಳಿಗೆ ಆತಂಕ
ಮಣಿಪಾಲದ ಮಣ್ಣಪಳ್ಳ ಕೆರೆ ಸುತ್ತಮುತ್ತ ಗಿಡಗಂಟಿ ಪೊದೆಗಳು ಬೆಳೆದುಕೊಂಡಿದ್ದು, ಈ ಭಾಗದಲ್ಲಿಯೂ ಚಿರತೆ ಅಡಗಿರುವ ಸಾಧ್ಯತೆ ಇದೆ. ನಿತ್ಯ ನೂರಾರು ಮಂದಿ ಹಿರಿಯರು, ಮಕ್ಕಳು ಇಲ್ಲಿ ವಿಹಾರಕ್ಕೆ ಆಗಮಿಸುತ್ತಿದ್ದು, ಚಿರತೆ ಓಡಾಟದ ವಿಚಾರದಿಂದ ಆತಂಕಗೊಂಡು ಕೆಲವರು ವಿಹಾರಕ್ಕೆ ತೆರಳು ಹಿಂದೇಟು ಹಾಕುತ್ತಿದ್ದಾರೆ. ತತ್‌ಕ್ಷಣವೇ ಇಲ್ಲಿ ಅಗತ್ಯ ಭದ್ರತ ಸಿಬಂದಿ ನೇಮಕ ಮಾಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ರಾತ್ರಿ ಅರಣ್ಯ ಇಲಾಖೆ ಗಸ್ತು ಅವಶ್ಯ
ಮಣಿಪಾಲದಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಮಣಿಪಾಲದಲ್ಲಿ ಗಿಡ, ಮರ ಪೊದೆಗಳಿರುವ ಜಾಗದಲ್ಲಿ ಚಿರತೆ ಸೆರೆ ಹಿಡಿಯುವ ಬೋನು ಇರಿಸುವಂತೆ ಒತ್ತಾಯಿಸಿದ್ದಾರೆ. “ಮಣಿಪಾಲ ಪರಿಸರದಲ್ಲಿ ಕಾಣಿಸಿ ಕೊಂಡ ಚಿರತೆ ಸೆರೆ ಹಿಡಿಯಲು ಇಲಾಖೆ ಎಲ್ಲ ರೀತಿಯಿಂದ ಕಾರ್ಯಯೋಜನೆ ರೂಪಿಸಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಇಲಾಖೆ ಸಿಬಂದಿ ಈಗಾಗಲೇ ಚಿರತೆ ಕಾಣಿಸಿಕೊಂಡ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಚಿರತೆ ಕಾಣಿಸಿಕೊಂಡಲ್ಲಿ ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಮಣಿಪಾಲ ಎಂಡ್‌ಪಾಯಿಂಟ್ ಪ್ರದೇಶದ ಬಳಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗಿದೆ. ರಾತ್ರಿ ವೇಳೆ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ತಿರುಗಿ ಪರಿಶೀಲನೆ ನಡೆಸುವಂತೆ ಅಧಿಕಾರಿ, ಸಿಬಂದಿಗೆ ಸೂಚಿಸಲಾಗಿದೆ. ಚಿರತೆ ಕಂಡರೆ ಕೂಡಲೇ ಆರ್‌ಎಫ್ಒ (9900816131), ಡಿಆರ್‌ಎಫ್ಒ (9449103163), ಉಡುಪಿ ಆರ್‌ಎಫ್ಒ ಕಚೇರಿ 0820-2523081 ಮಾಹಿತಿ ನೀಡಬಹುದು.” – ವಾರಿಜಾಕ್ಷಿ, ಆರ್‌ಎಫ್ಒ, ಅರಣ್ಯ ಇಲಾಖೆ, ಉಡುಪಿ.