Advertisement

ಮಣಿಪಾಲ KMC ಆಸ್ಪತ್ರೆ ಲ್ಯಾಬ್‌ ಗೆ NABL ಪ್ರಮಾಣಪತ್ರ

08:15 AM May 15, 2018 | Team Udayavani |

ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯ ವ್ಯವಸ್ಥೆಯ ಪರೀಕ್ಷಾ ಮಾಪನಾಂಕಕ್ಕೆ ರಾಷ್ಟ್ರೀಯ ಪ್ರಯೋಗಾಲಯ ಪರೀಕ್ಷಾ ಮಾನ್ಯತಾ ಮಂಡಳಿಯಿಂದ (NABL) ಪ್ರಮಾಣಪತ್ರ ದೊರೆತಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಆಸ್ಪತ್ರೆಯ ಸಿಇಒ ಸಿಜಿ ಮುತ್ತಣ್ಣ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.

Advertisement

ಪ್ರಮಾಣಪತ್ರದ ಮಾನ್ಯತೆಯು ಆಸ್ಪತ್ರೆಯ ಕ್ಲಿನಿಕಲ್‌ ಲ್ಯಾಬ್‌, ಕ್ಲಿನಿಕಲ್‌ ಬಯೋಕೆಮಿಸ್ಟ್ರಿ, ಕ್ಲಿನಿಕಲ್‌ ಪೆಥಾಲಜಿ, ಹೆಮಟಾಲಜಿ, ಇಮ್ಯುನೋ ಹೆಮಟಾಲಜಿ, ಮೈಕ್ರೋಬಯಾಲಜಿ, ಸೆರಾಲಜಿ, ಹಿಸ್ಟೋಪೆಥಾಲಜಿ, ಸೈಟೋ ಪೆಥಾಲಜಿಯನ್ನು ಒಳಗೊಂಡಿದೆ. ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, NABL ಮಾನ್ಯತೆ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯ ಸೇವೆಗಳ ಕಿರೀಟಕ್ಕೆ ಮತ್ತೂಂದು ಗರಿ ಸೇರಿಸಿದೆ. ಇದು ನಿಖರತೆಯ ಅತ್ಯುನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಇಲ್ಲಿನ ವೈದ್ಯರನ್ನು ಬೆಂಬಲಿಸುವುದಲ್ಲದೆ, ಪ್ರಯೋಗಾಲಯದ ವರದಿ ಪರಿಶೀಲಿಸುವುದು ಅಥವಾ ಎರಡನೆಯ ಅಭಿಪ್ರಾಯದ ಅಗತ್ಯದ ಆವಶ್ಯಕತೆ ಪೂರೈಸುತ್ತದೆ. ಮಾದರಿಯನ್ನು ಹೆಚ್ಚಾಗಿ ಮಣಿಪಾಲ ಆಸ್ಪತ್ರೆಯ ಪ್ರಯೋಗಾಲಯಗಳಿಗೆ ಸ್ಪಷ್ಟತೆಗಾಗಿ ಕಳುಹಿಸಲಾಗುವುದು. ಆದ್ದರಿಂದ ಇದನ್ನು ಇಲ್ಲಿ ಉಲ್ಲೇಖಿತ ಪ್ರಯೋಗಾಲಯವೆಂದೂ ಕರೆಯುವರು ಎಂದರು. 

ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ 2017ರ ಡಿಸೆಂಬರ್‌ನಲ್ಲಿ ಸೌಲಭ್ಯಗಳು, ಅರ್ಹ ಮಾನವ ಸಂಪದ ಮತ್ತು ಗುಣಮಟ್ಟದ ಮಾನದಂಡ ಪರಿಶೀಲಿಸಲು NABL ಅಧಿಕಾರಿಗಳಿಂದ ತಪಾಸಣೆ ನಡೆದು ಇದೀಗ ಪ್ರಮಾಣಪತ್ರ ನೀಡಲಾಗಿದೆ ಎಂದರು.

ಮಾಹೆಯ ಸಹಕುಲಪತಿ ಡಾ| ವಿನೋದ್‌ ಭಟ್‌, ಸಹಉಪಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ಡೀನ್‌ ಡಿ. ಪ್ರಜ್ಞಾ ರಾವ್‌, ಸಹಾಯಕ ಡೀನ್‌ ದ್ವಯರಾದ ಡಾ| ಶರತ್‌ ರಾವ್‌, ಡಾ| ಚಿರಂಜಯ್‌ ಮುಖ್ಯೋಪಾಧ್ಯಾಯ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಆಸ್ಪತ್ರೆ ಪ್ರಯೋಗಾಲಯ ಮಂಡಳಿ ನಿರ್ದೇಶಕ ಡಾ| ಚೇತನ್‌ ಮನೋಹರ್‌, ವಿವಿಧ ಪ್ರಯೋಗಾಲಯ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next