Advertisement

Manipal; ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದ ‘ಕಲ್ಕಿ ನಿರ್ದೇಶಕ ನಾಗ್ ಅಶ್ವಿನ್

06:38 PM Aug 01, 2024 | Team Udayavani |

ಮಣಿಪಾಲ:ಅದ್ದೂರಿ ಪ್ಯಾನ್ ಇಂಡಿಯಾ ಸಿನೆಮಾ ‘ಕಲ್ಕಿ-2898’ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಅವರು ಮಣಿಪಾಲ ಭಾರತ್ ಸಿನೆಮಾಸ್‌ನಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿ, ಸಂವಾದದಲ್ಲಿ ಪಾಲ್ಗೊಂಡರು.

Advertisement

ಮಾಹೆ ಎಂಐಸಿ ವತಿಯಿಂದ ಸಿನಿಮಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಚಿತ್ರ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ನಿರ್ದೇಶಕರನ್ನು ಕಂಡು ಪುಳಕಗೊಂಡರು. ಸಿನೆಮಾ ಮುಗಿದ ಅನಂತರ ಮಾಹೆ, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ ನ ಹಳೆ ವಿದ್ಯಾರ್ಥಿಯಾಗಿದ್ದು, ಇಲ್ಲಿಗೆ ಭೇಟಿ ನೀಡಿದ್ದು, ನನ್ನ ಶೈಕ್ಷಣಿಕ ಜೀವನದ ನೆನಪುಗಳು ನನ್ನ ಮತ್ತೆ ಆವರಿಸಿಕೊಂಡಿದೆ. ಮಣಿಪಾಲ ಎಂಡ್‌ಪಾಯಿಂಟ್ ನನ್ನ ಇಷ್ಟದ ಸ್ಥಳವಾಗಿತ್ತು. ಅಲ್ಲಿಗೆ ಭೇಟಿ ನೀಡಬೇಕು ಎಂದುಕೊಂಡಿದ್ದೆೆ ಇತ್ತೀಚೆಗೆ ಚಿರತೆ ಓಡಾಟ ಹೆಚ್ಚಿರುವುದರಿಂದ ಅಲ್ಲಿನ ಭೇಟಿ ನಿರ್ಬಂಧಿಸಲಾಗಿದೆ ಎಂಬುದು ತಿಳಿಯಿತು.

ಎಂಐಸಿ ಶಿಕ್ಷಣ ಪಡೆಯುತ್ತಿದ್ದ ದಿನಗಳಲ್ಲಿ ನಾನು ಕಿರುಚಿತ್ರಗಳನ್ನು ಮಾಡುತ್ತಿದ್ದೆ. ಆದರೆ ಇದನ್ನು ಯಾರಿಗೂ ಪ್ರದರ್ಶಿಸುವ ಧೈರ್ಯ ಮಾಡಿರಲಿಲ್ಲ. ಇಂದು ದೊಡ್ಡ ಯಶಸ್ವಿನ ಮುಂದೆ ನಿಮ್ಮ ಎದುರು ನಿಂತಿದ್ದೇನೆ. ಈ ಯಶಸ್ಸಿಗೆ ಮಣಿಪಾಲದಲ್ಲಿ ಕಳೆದ ದಿನಗಳು ನನಗೆ ಪ್ರೇರಣೆ ಎಂದರು. ಸಿನಿಮಾದ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮಾಹೆ ಸಹಕುಲಾಧಿಪತಿ ಡಾ ಎಚ್. ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್ ದಂಪತಿ, ಎಂಐಸಿ ನಿರ್ದೇಶಕಿ ಡಾ ಪದ್ಮರಾಣಿ ಮೊದಲಾದವರು ಭಾಗವಹಿಸಿದ್ದರು.

Advertisement

2001ರಿಂದ-2004ರವರೆಗೆ ಮಣಿಪಾಲ ಎಂಐಸಿಯಲ್ಲಿ ಜರ್ನಲಿಸಂ ಪದವಿ ಪಡೆದಿದ್ದ ನಾಗ್ ಅಶ್ವಿನ್ ಅವರು ಅನಂತರ ತೆಲುಗು ಚಿತ್ರರಂಗದಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು. ಮಹಾನಟಿ, ಜಾತಿ ರತ್ನಾಲು ಸೂಪರ್ ಹಿಟ್ ಸಿನೆಮಾಗಳನ್ನು ನೀಡಿದ್ದು, ಇದೀಗ ಕಲ್ಕಿ ಸಿನೆಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಕಲ್ಕಿ ಸಿನೆಮಾದಲ್ಲಿ ಮಹಾಭಾರತ ಪಾತ್ರಗಳ ಕಥೆ ಆಯ್ದುಕೊಂಡು ಭವಿಷ್ಯದಲ್ಲಿ ನಡೆಯುವ ಘಟನೆಯೊಂದಕ್ಕೆ ಆ ಪಾತ್ರಗಳನ್ನು ತಳುಕು ಹಾಕಿಕೊಂಡು ಕಥೆ ರೂಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next