Advertisement

ಮಣಿಪಾಲ ಸಮಗ್ರ ಕ್ಯಾನ್ಸರ್‌ ಆರೈಕೆ ಕೇಂದ್ರ

07:34 AM Mar 24, 2019 | |

ಮುಂದುವರಿದುದು-  ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಲ್ಲಿ ನಾಲ್ಕು ವಿಭಾಗಗಳಿವೆ.
1. ಅಪಾಯಕಾರಿ ಆಗಬಹುದಾದ ಗಂಟುಗಳು, ಊತಗಳು, ಮಚ್ಚೆಗಳು ಮತ್ತು ಹುಣ್ಣುಗಳಿಗೆ ನಡೆಸುವ ಶಸ್ತ್ರಚಿಕಿತ್ಸೆ.
2. ಗೊತ್ತಾಗಿರುವ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಿಸಲು ಮತ್ತು ಗುಣ ಹೊಂದಿದ ಬಳಿಕ ಸರಿಹೋಗುವಂತೆ ಅಂಗಾಂಗ ಪುನಾರಚನೆ ಶಸ್ತ್ರಚಿಕಿತ್ಸೆ.
3. ಮೆಟಾಸ್ಟಾಟಿಕ್‌ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಲು ನಡೆಸುವ ಶಸ್ತ್ರಚಿಕಿತ್ಸೆ.
4. ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳಿಂದ ಉಪಶಮನ ಹೊಂದಲು ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸಲು ಕೈಗೊಳ್ಳುವ ಶಸ್ತ್ರಚಿಕಿತ್ಸೆಗಳು (ಪಾಲಿಯೇಟಿವ್‌ ಶಸ್ತ್ರಚಿಕಿತ್ಸೆ).
ಐದನೆಯ ವಿಭಾಗವಾದ ಪುನಾರಚನಾ ಶಸ್ತ್ರಚಿಕಿತ್ಸೆಯು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಲ್ಲವಾದರೂ ಎಲ್ಲ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಳು ಸ್ವಲ್ಪ ಮಟ್ಟಿನ ಪುನಾರಚನೆಯನ್ನು ಒಳಗೊಂಡಿರುತ್ತವೆ.

Advertisement

ಮುಖ್ಯಾಂಶಗಳು:
1. ಓಂಕಾಲಜಿ ಶಸ್ತ್ರಕ್ರಿಯೆಯು ಅಪಾಯಕಾರಿ ಬೆಳವಣಿಗೆಗಳನ್ನು ಪತ್ತೆಹಚ್ಚಲು ನಡೆಸುವ ಶಸ್ತ್ರಕ್ರಿಯೆಗಳು (ಬಯಾಪ್ಸಿ), ಪ್ರಾಥಮಿಕ ಗಡ್ಡೆಗಳು ಮತ್ತು ಮುಂದುವರಿದ ಹಂತಗಳನ್ನು ನಿವಾರಿಸಲು ನಡೆಸುವ ಶಸ್ತ್ರಕ್ರಿಯೆಗಳು ಹಾಗೂ ಉಪಶಮನಕಾರಿ ಶಸ್ತ್ರಕ್ರಿಯೆಗಳನ್ನು ಒಳಗೊಳ್ಳುತ್ತದೆ.
2. ಪುನಾರಚನೆಯ ಶಸ್ತ್ರಕ್ರಿಯೆಯು ಪೂರ್ತಿಯಾಗಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಅಲ್ಲವಾದರೂ ವಾಸ್ತವವಾಗಿ ಎಲ್ಲ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಳು ಸ್ವಲ್ಪಮಟ್ಟಿಗಿನ ಪುನಾರಚನೆಯನ್ನು ಹೊಂದಿರುತ್ತವೆ. ಶಸ್ತ್ರಚಿಕಿತ್ಸೆಯ ಈ ಹಂತದಲ್ಲಿ ಸಾಮಾನ್ಯವಾಗಿ ಪ್ಲಾಸ್ಟಿಕ್‌ ಅಥವಾ ವಾಸ್ಕಾéಲಾರ್‌ ಶಸ್ತ್ರಚಿಕಿತ್ಸಾ ಪರಿಣಿತರು ನೆರವು ಒದಗಿಸುತ್ತಾರೆ.
3. ರಚನಾತ್ಮಕ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗಳ ಗುರಿ ಆರೋಗ್ಯವಂತ ಅಂಗಾಂಶಗಳಿಗೆ ಹಾನಿ ಮಾಡದೆಯೇ ಅಪಾಯಕಾರಿ ಗಡ್ಡೆಗಳನ್ನು ನಿವಾರಿಸುವುದು.
4. ಸರ್ಜಿಕಲ್‌ ಓಂಕಾಲಜಿಯು ಕಾಯಿಲೆ ಆಧರಿತ ಶಸ್ತ್ರಚಿಕಿತ್ಸಾ ಶಿಸ್ತು ಆಗಿದ್ದು, ಇದರಲ್ಲಿಯ ಶೈಕ್ಷಣಿಕ ತರಬೇತಿ, ಕೋರ್ಸ್‌ಗಳು ಕ್ಯಾನ್ಸರ್‌ ರೋಗಿಗಳಲ್ಲಿ ಕ್ಯಾನ್ಸರ್‌ ತಡೆ, ರೋಗ ಪತ್ತೆ, ಚಿಕಿತ್ಸೆ ಮತ್ತು ಪುನಶ್ಚೇತನದಂತಹ ಬಹು ಸ್ವರೂಪದ ಚಿಕಿತ್ಸಾ ವಿಧಾನಕ್ಕೆ ಸರ್ಜನ್‌ಗಳನ್ನು ಸಿದ್ಧಗೊಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next