Advertisement
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವಿಶೇಷ ಅನುಭವವನ್ನು ಯುವ ಕ್ಯಾನ್ಸರ್ ಪೀಡಿತರು ಮತ್ತು ಅವರ ಪೋಷಕರಿಗೆ ಒದಗಿಸಲು ಮಣಿಪಾಲ್ ಆಸ್ಪತ್ರೆಗಳು ಈ ವಿಶೇಷ ಆಯೋಜನೆ ಕೈಗೊಂಡಿದ್ದರು.
Related Articles
Advertisement
20 ಕ್ಯಾನ್ಸರ್ ವಿಜೇತರಲ್ಲಿ, ವಿಶೇಷವಾದ ಸವಾಲುಗಳೊಂದಿಗೆ ಜಯಶಾಲಿಯಾದ ಇಬ್ಬರು ಪುಟಾಣಿ ವೀರರೂ ಇದ್ದರು. ಇವರು, ಮಾನ್ಯ (8 ವರ್ಷ) ಮತ್ತು ಕಿರಣ್ ರಾಥೋಡ್ (10 ವರ್ಷ), ಇಷ್ಟು ಚಿಕ್ಕ ವಯಸ್ಸಿನಲ್ಲಿ ರಕ್ತ ಮತ್ತು ಮೂಳೆ ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ ಪುಟಾಣಿ ವೀರರು. ರಕ್ತದ ಕ್ಯಾನ್ಸರ್ನ ಸವಾಲುಗಳೊಂದಿಗೆ ವೈದ್ಯಕೀಯ ಪ್ರಯಾಣವನ್ನು ಆರಂಭಿಸಿದಾಗ ಮಾನ್ಯ ಅವರಿಗೆ ಕೇವಲ 8 ವರ್ಷ. ಜ್ವರದ ಕಾಯಿಲೆ, ಕಿಬ್ಬೊಟ್ಟೆಯ ಹಿಗ್ಗುವಿಕೆ ಮತ್ತು ಸಾಮಾನ್ಯವಾದ ದೌರ್ಬಲ್ಯ ಸೇರಿದಂತೆ ರೋಗಲಕ್ಷಣಗಳು ಆಕೆಯ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಿ ಉಂಟುಮಾಡಿತ್ತು, ಮಾನ್ಯಳ ಪೋಷಕರು ಅವಳನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆತಂದರು, ಅಲ್ಲಿ ಆಕೆಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ – ಪ್ರಿ-ಬಿ-ಸೆಲ್ ಟೈಪ್ ರಕ್ತದ ಕ್ಯಾನ್ಸರ್ಎಂ ಇರುವುದು ಗುರುತಿಸಲಾಯಿತು.
ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆಯ ಹೆಮಟೊಲಜಿ, ಹೆಮಟೊ ಆಂಕೊಲಾಜಿ ಮತ್ತು ಮೂಳೆ ಮಜ್ಜೆಯ ಕಸಿ ಸಲಹೆಗಾರ ಡಾ. ಮಲ್ಲಿಕಾರ್ಜುನ್ ಕಲಶೆಟ್ಟಿ, ಮಾನ್ಯ ಅವರ ಪ್ರಯಾಣದ ಕುರಿತು ಪ್ರತಿಕ್ರಿಯಿಸಿ, “ರೋಗನಿರ್ಣಯದ ಆರಂಭಿಕ ಆಘಾತದಿಂದ ಕೀಮೋಥೆರಪಿ ಮತ್ತು ಇತರ ಸಹಾಯಕ ಆರೈಕೆಯ ಅನಿರೀಕ್ಷಿತತೆಯವರೆಗೆ ಮಾನ್ಯ ಮತ್ತು ಅವರ ಕುಟುಂಬ ಭಾವನೆಗಳ ರೋಲರ್ ಕೋಸ್ಟರ್ ಅನ್ನು ಎದುರಿಸಿದರು. ಆಕೆಯ ಚಿಕಿತ್ಸಾ ಪಯಣ ನೋವು ಮತ್ತು ವಿಜಯೋತ್ಸವದ ಸಿಹಿ-ಕಹಿ ಕ್ಷಣಗಳನ್ನು ಒಳಗೊಂಡಿತ್ತು. ಸೆಪ್ಸಿಸ್ ಮತ್ತು ಮರುಕಳಿಸುವ ಜ್ವರದಂತಹ ಕಾರಣಗಳಿಂದ ಆಕೆಯ ಕೀಮೋ ಪೋರ್ಟ್ ಅನ್ನು ತೆಗೆದು ತಗೆಯಬೇಕಾಯಿತು. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮಾನ್ಯಾ ಚೇತರಿಕೆಯ ಹಾದಿಯಲ್ಲಿ ದಿಟ್ಟವಾಗಿ ನಡೆದು, ಇಂಡಕ್ಷನ್ ಮತ್ತು ಕನ್ಸಾಲಿಡೇಶನ್ ಥೆರಪಿಯನ್ನು ಪೂರ್ಣಗೊಳಿಸಿದರು, ಮತ್ತು ಈಗ, ಅವರು ಸ್ಥಿರವಾದ ಜೀವನವನ್ನು ಅನುಭವಿಸುತ್ತಿದಾರೆ, ಸವಾಲುಗಳನ್ನು ಜಯಿಸಿ ಮಾನ್ಯ ಉತ್ಸಾಹದ ಚಿಲುಮೆಯಾಗಿದ್ದಾರೆ” ಎಂದು ಹೇಳಿದರು.
ಅದೇ ರೀತಿ, 10 ವರ್ಷದ ಬಾಲಕ ಕಿರಣ್ ರಾಥೋಡ್, ನಾನ್-ಮೆಟಾಸ್ಟಾಟಿಕ್ ಲೆಫ್ಟ್ ಟಿಬಿಯಾ ಆಸ್ಟಿಯೊಸಾರ್ಕೊಮಾ ಎಂಬ ಮೂಳೆ ಕ್ಯಾನ್ಸರ್ನೊಂದಿಗೆ ಹೋರಾಡಿ ಜಯಸಿದ್ದಾನೆ. ಎಡಗಾಲಿನಲ್ಲಿ ನಿರಂತರವಾದ ನೋವು ಮತ್ತು ಊತ, ನಡೆಯಲು ಕಷ್ಟ ದಿಂದ ಅವನ ಅಗ್ನಿಪರೀಕ್ಷೆಯು ಪ್ರಾರಂಭವಾಯಿತು. ಜೂನ್ 2023 ರಲ್ಲಿ ಸಮಗ್ರ ರೋಗನಿರ್ಣಯದ ನಂತರ, ಕಿರಣ್ ಅವರು ಡಾ.ಶ್ರೀಮಂತ್ ಬಿ ಎಸ್, ಲೀಡ್ ಕನ್ಸಲ್ಟೆಂಟ್ – ಆರ್ಥೋಪೆಡಿಕ್ ಆಂಕೊಲಾಜಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್ಪೋರ್ಟ್ ರಸ್ತೆ ಇವರ ನೇತೃತ್ವದಲ್ಲಿ ನಿಯೋಡ್ಜುವಂಟ್ ಕಿಮೊಥೆರಪಿ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಚಿಕಿತ್ಸೆಗಳಿಗೆ ಒಳಗಾದರು. ಕಷ್ಟಕರವಾದ ಚೇತರಿಕೆಯ ಪ್ರಕ್ರಿಯೆಯ ಹೊರತಾಗಿಯೂ, ಕಿರಣ್ ಅವರ ಸ್ಥೈರ್ಯ, ಪೋಷಕರ ಬೆಂಬಲ, ಮತ್ತು ಕಾಳಜಿ ಇಂದು ಅವರನ್ನು ಆರೋಗ್ಯಕರ ಜೀವನಕ್ಕೆ ಕೊಂಡೊಯ್ದಿದೆ.
ಈ ಕಥೆಗಳು ಸಕಾಲಿಕ ಚಿಕಿತ್ಸೆಗಳು ಮತ್ತು ಬೆಂಬಲದ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತವೆ, ಮಣಿಪಾಲ್ ಆಸ್ಪತ್ರೆಗಳು, ಕ್ಯಾನ್ಸರ್ ಅನ್ನು ಜಯಿಸಿದ ಯುವ ಜೀವಗಳ ಬದುಕಿನ ಮೇಲೆ ಹೇಗೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.
ಮಣಿಪಾಲ್ ಹಾಸ್ಪಿಟಲ್ಸ್ ಕಮ್ಯುನಿಟಿ ಕನೆಕ್ಟ್ ಉಪಕ್ರಮದ ಭಾಗವಾಗಿ, ಮಾನ್ಯ ಮತ್ತು ಕಿರಣ್ ರಾಥೋಡ್ ಇಬ್ಬರೂ ಕ್ಯಾನ್ಸರ್ ವಿಜೇತರಲ್ಲಿ ಸೇರಿದ್ದಾರೆ, ಅವರು RCB ಮತ್ತು SRH ನಡುವಿನ IPL ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿ ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ಅವಕಾಶವನ್ನು ಪಡೆದರು. ಈ ಅವಕಾಶವು ಕೇವಲ ಒಂದು ಮೋಜಿನ ಘಟನೆಗಿಂತ ಹೆಚ್ಚಾಗಿತ್ತು-ಅವರು ತಮ್ಮ ಕ್ರಿಕೆಟ್ ಆರಾಧ್ಯ ದೈವಗಳನ್ನು ಭೇಟಿಯಾಗುವ ಮತ್ತು ಲೈವ್ ಪಂದ್ಯದ ರೋಮಾಂಚಕ ವಾತಾವರಣವನ್ನು ಅನುಭವಿಸುವ ಸುವರ್ಣಾವಕಾಶವಾಗಿತ್ತು.