Advertisement

AMRI ಹಾಸ್ಪಿಟಲ್ಸ್‌ನ 84% ಪಾಲನ್ನು ಸ್ವಾಧೀನಪಡಿಸಿಕೊಂಡ ಮಣಿಪಾಲ್ ಹಾಸ್ಪಿಟಲ್ಸ್

10:48 PM Sep 20, 2023 | Team Udayavani |

ಕೋಲ್ಕತಾ: ಭಾರತದ ಎರಡನೇ ಅತಿ ದೊಡ್ಡ ಆಸ್ಪತ್ರೆ ಗಳ ಸಮೂಹವಾಗಿರುವ ಮಣಿಪಾಲ್ ಹಾಸ್ಪಿಟಲ್ಸ್, ಎಎಮ್‌ಆರ್‌ಐ ಹಾಸ್ಪಿಟಲ್ಸ್ ಲಿಮಿಟೆಡ್‌ನಲ್ಲಿ 84 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಬುಧವಾರ ಪ್ರಕಟಿಸಿದ್ದು, ದೇಶದಾದ್ಯಂತ ತನ್ನ ಹಾಸಿಗೆ ಸಾಮರ್ಥ್ಯವನ್ನು 9500 ಕ್ಕೆ ತಲುಪಿಸಿದೆ.

Advertisement

ಮಣಿಪಾಲ್ ಆಸ್ಪತ್ರೆಗಳ 59 ಪ್ರತಿಶತವನ್ನು ಹೊಂದಿರುವ ಸಿಂಗಾಪುರ ಸರಕಾರದ ಹೂಡಿಕೆಯ ಅಂಗವಾದ ಟೆಮಾಸೆಕ್ ಹೋಲ್ಡಿಂಗ್ಸ್ ಸಾಲ ಸೇರಿದಂತೆ ಎಮಾಮಿ ಗ್ರೂಪ್ ಪ್ರವರ್ತಕರಿಗೆ 2300 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎಂದು ನಿಕಟ ಮೂಲಗಳು ಪಿಟಿಐಗೆ ತಿಳಿಸಿವೆ.

ಎಂಟರ್‌ಪ್ರೈಸ್ ಮೌಲ್ಯಮಾಪನವು 2400 ಕೋಟಿ ರೂಪಾಯಿಗಳಾಗಿದ್ದು, AMRI ಆಸ್ಪತ್ರೆ 1600 ಕೋಟಿ ರೂ. ಸಾಲವನ್ನು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಒಂದೇ ಆಸ್ಪತ್ರೆಯನ್ನು ಹೊಂದಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು 2021 ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಮಣಿಪಾಲ್ ಆಸ್ಪತ್ರೆ ಪೂರ್ವದಲ್ಲಿ ವೈದ್ಯಕೀಯ ಜಾಲ ವಿಸ್ತರಿಸಿತ್ತು. ಈ ಸ್ವಾಧೀನವು ಮಣಿಪಾಲ್ ಆಸ್ಪತ್ರೆಗಳಿಗೆ ಪೂರ್ವ ಭಾರತದಲ್ಲಿ ದೊಡ್ಡ ಹೆಜ್ಜೆಗುರುತು ಮತ್ತು ವಿಸ್ತರಿತ ಉಪಸ್ಥಿತಿಯನ್ನು ಒದಗಿಸುತ್ತದೆ, ಇದು ಪ್ರದೇಶದ ಅತಿದೊಡ್ಡ ಆಸ್ಪತ್ರೆ ಸರಪಳಿಯಾಗುತ್ತದೆ. ಇಮಾಮಿ ಗ್ರೂಪ್ ಹೂಡಿಕೆದಾರರಾಗಿ ಆಸ್ಪತ್ರೆಯಲ್ಲಿ 15 ಪ್ರತಿಶತ ಪಾಲನ್ನು ಉಳಿಸಿಕೊಳ್ಳುತ್ತದೆ, ಆದರೆ ಪಶ್ಚಿಮ ಬಂಗಾಳ ಸರಕಾರವು ಒಂದು ಶೇಕಡಾ ಪಾಲನ್ನು ಉಳಿಸಿಕೊಳ್ಳುತ್ತದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next