Advertisement

ಐಐಟಿ, ಏಮ್ಸ್‌ಗಳಿಗೆ ಕನ್ನಡಿಗರ ಪ್ರವೇಶ ಹೆಚ್ಚಲಿ: ಡಿ.ರೂಪಾ

10:50 PM Nov 18, 2021 | Team Udayavani |

ಬೆಂಗಳೂರು: ಐಐಟಿ,  ಏಮ್ಸ್‌ನಂಥ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ಅಭ್ಯರ್ಥಿಗಳು ವಿರಳ. ನೆರೆಯ ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಹೋಲಿಸಿದಲ್ಲಿ ನಾವು ತುಸು ಹಿಂದಿದ್ದೇವೆ. ಹೀಗಾಗಿ, ಕನ್ನಡದ ವಿಜ್ಞಾನ ವಿದ್ಯಾರ್ಥಿಗಳು  “ಗೆಟ್‌ ಮೈ ಕ್ಲಾಸ್‌’ ನಂಥ ಆ್ಯಪ್‌ ಅನ್ನು ಬಳಸಿಕೊಂಡು, ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮುಖ್ಯಸ್ಥೆ, ಐಪಿಎಸ್‌ ಅಧಿಕಾರಿ ಡಿ. ರೂಪಾ  ಹೇಳಿದರು.

Advertisement

“ಉದಯವಾಣಿ’  ಕಚೇರಿಯಲ್ಲಿ ಗುರುವಾರ ಮಣಿಪಾಲ್‌ ಗ್ರೂಪ್‌ನ  “ಗೆಟ್‌ ಮೈ ಕ್ಲಾಸ್‌’ (GetMiClass) ಅಪ್ಲಿಕೇಷನ್‌ ಅನ್ನು ಅನಾವರಣಗೊಳಿಸಿ , ಅಮೂಲ್ಯ ಮಾಹಿತಿಯುಳ್ಳ  ಈ ಆ್ಯಪ್‌ಅನ್ನು  ಕೇವಲ 199 ರೂ.ಗಳಿಗೆ ಪರಿಚಯಿಸುತ್ತಿರುವುದು  ಖುಷಿ ತಂದಿದೆ. ಅತಿಕಡಿಮೆ ಬೆಲೆಯಲ್ಲಿ, ಸರಳವಾಗಿ ವಿಜ್ಞಾನವನ್ನು ಪ್ರಸ್ತುತಪಡಿಸಿರುವ ಈ ಆ್ಯಪ್‌ಖಂಡಿತವಾಗಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ವಿದ್ಯಾರ್ಥಿ ಗಳು ಶಿಕ್ಷಣದ ಪರಿಕರ ಹಾಗೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಅಂತರವನ್ನು ಸರಿದೂಗಿಸಿ,  “ಗೆಟ್‌ ಮೈ ಕ್ಲಾಸ್‌’ ಆ್ಯಪ್‌ ರಾಜ್ಯದ ಎಲ್ಲೆಡೆಗೂ ತಲುಪಲಿ ಎಂದು ಆಶಿಸಿದರು.

ಈಗಿನವರು ಅದೃಷ್ಟವಂತರು:

“ಉದಯವಾಣಿ’ಯು ದಶಕ ಗಳಿಂದಲೂ ಶಿಕ್ಷಣ ಕ್ಷೇತ್ರದ ಕುರಿತು ಹೆಚ್ಚಿನ ಮುತುವರ್ಜಿ ವಹಿಸುತ್ತಲೇ ಬಂದಿದೆ. ನಮ್ಮ ಕಾಲಘಟ್ಟದಲ್ಲಿ ಇಂಥ ಆ್ಯಪ್‌ಗ್ಳು ಇರಲಿಲ್ಲ. ಅದು ಸ್ಮಾರ್ಟ್‌ ಫೋನ್‌ ಯುಗವೂ ಆಗಿರಲಿಲ್ಲ. ಆದರೆ, ಇಂದಿನ ಮಕ್ಕಳು ತುಂಬಾ ಅದೃಷ್ಟವಂತರು.  “ಗೆಟ್‌ ಮೈ ಕ್ಲಾಸ್‌’ ನಂಥ ಆ್ಯಪ್‌ಗ್ಳಿಂದ ಈಗಿನವರಿಗೆ ಯೋಗ್ಯ ಮಾರ್ಗದರ್ಶನ ನೀಡಲು ಸಾಧ್ಯ.  “ಉದಯವಾಣಿ’ ಬಳಗದ ಈ ನೂತನ ಪ್ರಯತ್ನಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು  ಹಾರೈಸಿದರು.

Advertisement

ಸಮಾರಂಭದಲ್ಲಿ ಮಣಿಪಾಲ್‌ ಗ್ರೂಪ್‌ನ ಗ್ರೂಪ್‌ ಸಿಎಚ್‌ಆರ್‌ಒ ಪ್ರಮೋದ್‌ ಫೆರ್ನಾಂಡಿಸ್‌, ಎಂಟಿಎಲ್‌ ಡಿಜಿಟಲ್‌ ಸಲೂಷನ್ಸ್‌ನ ಉಪಾಧ್ಯಕ್ಷ ಗುರುಪ್ರಸಾದ್‌ ಕಾಮತ್‌ಹಾಗೂ ಇತರರು ಉಪಸ್ಥಿತರಿದ್ದರು.

 ಏನಿದು ಗೆಟ್‌ ಮೈ ಕ್ಲಾಸ್‌:

11, 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಆ್ಯಪ್‌. ಸಿಇಟಿ, ನೀಟ್‌, ಜೆಇಇ ಪರೀಕ್ಷಾ ತಯಾರಿಗೆ ಅಗತ್ಯ ಜ್ಞಾನ ಸರಕುಗಳಿವೆ.

ಎಲ್ಲಿ ಲಭ್ಯ? : ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ.

ವಿಶೇಷತೆಗಳು :

 11, 12ನೇ ತರಗತಿಯ ಭೌತಶಾಸ್ತ್ರ,
ರಸಾಯನ‌ ಶಾಸ್ತ್ರ, ಗಣಿತ, ಜೀವಶಾಸ್ತ್ರದ ಪ್ರತಿಪಾಠದ ಸರಳ ಕಾನ್ಸೆಪ್ಟ್.
 ಅನ್‌ಲಿಮಿಟೆಡ್‌ ಮಾರ್ಕ್‌ ಟೆಸ್ಟ್‌.
 15 ಸಾವಿರಕ್ಕೂ ಅಧಿಕ ಪ್ರಶ್ನೆಗಳು.
 ಪ್ರತಿ ಪ್ರಶ್ನೆಗೂ ವೀಡಿಯೊ ಇಲ್ಲಸ್ಟ್ರೇಷನ್ಸ್‌ ಮೂಲಕ ಪರಿಹಾರ.
 ಕಡಿಮೆ ಸಮಯದಲ್ಲಿ ಉತ್ತರಿ ಸಲು ಅಗತ್ಯ ಶಾರ್ಟ್‌ಕಟ್ಸ್‌, ಟ್ರಿಕ್ಸ್‌.
 7 ದಿನಗಳ ಫ್ರೀ ಟ್ರಯಲ್‌.

Advertisement

Udayavani is now on Telegram. Click here to join our channel and stay updated with the latest news.

Next