Advertisement

ಅಮೆರಿಕದಲ್ಲಿ ಗ್ರಾಹಕ ವಲಯ ಕೇಂದ್ರೀತ ಎಸ್‌ಪಿಎಸಿ ಪ್ರಾರಂಭಿಸಿದ‌ ಮಣಿಪಾಲ್ ಗ್ರೂಪ್ ಅಧ್ಯಕ್ಷ

07:22 PM Jun 15, 2021 | Team Udayavani |

ನವದೆಹಲಿ: ಖಾಸಗಿ ಈಕ್ವಿಟಿ ಅನುಭವಿ ರೋಹನ್ ಅಜಿಲಾ ಮತ್ತು ಮಣಿಪಾಲ್ ಗ್ರೂಪ್‌ನ ಅಧ್ಯಕ್ಷ ಗೌತಮ್ ಪೈ ಅವರು ಏಷ್ಯಾದಲ್ಲಿ ಸದೃಢ ನೆಲೆ ಹೊಂದಿರುವ ಗ್ರಾಹಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಮೆರಿಕದಲ್ಲಿ ವಿಶೇಷ ಉದ್ದೇಶದ ಉದ್ಯಮವನ್ನು ಸ್ಥಾಪಿಸಿದ್ದಾರೆ.

Advertisement

ಗ್ಲೋಬಲ್ ಕನ್ಸ್ಯೂಮರ್ ಅಕ್ವಿಸಿಷನ್ ಕಾರ್ಪೊರೇಷನ್ (ಜಿಸಿಎಸಿ) ಈ ವಾರ  170 ಮಿಲಿಯನ್ ಡಾಲರ್ ಮೌಲ್ಯದ ಆರಂಭಿಕ ಸಾರ್ವಜನಿಕ ಷೇರು (ಇನ್ಷಿಯಲ್ ಪಬ್ಲಿಕ್ ಆಪರಿಂಗ್) ಸಂಗ್ರಹಿಸಿದೆ.  ಕಂಪನಿಯು ನಾಸ್ಡಾಕ್‌ನಲ್ಲಿ ‘ಜಿಎಸಿಕ್ಯೂಯು’ ಚಿಹ್ನೆಯಡಿಯಲ್ಲಿ ಪಟ್ಟಿ ಮಾಡಲಾಗಿದೆ. ಷೇರು ಸ್ವಾಧೀನ ನಿರ್ವಹಣೆಯು ಅದರ ಐಪಿಒ ಪ್ರಾಸ್ಪೆಕ್ಟಸ್‌ನ ಪ್ರಕಾರ ವ್ಯಾಪಕ ಹೂಡಿಕೆ ಮತ್ತು ಸಾಗರೋತ್ತರ ಆಪರೇಟರ್ ಅನುಭವವ ಹೊಂದಿದೆ.

ಈ ಕುರಿತು ಮಾತನಾಡಿರುವ ಜಿಸಿಎಸಿಯ ಸಹ-ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಿಲಾ , ನಾವು ಏಷ್ಯಾದ ಮಹತ್ವದ ಮತ್ತು ಬಲವಾದ ಸಾಮರ್ಥ್ಯವನ್ನು ಹೊಂದಿರುವ ಜಾಗತಿಕ ಗ್ರಾಹಕ ಕಂಪನಿಗಳ ಮೇಲೆ ಕೇಂದ್ರೀಕರಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.

500 ಮಿಲಿಯನ್ ಡಾಲರ್ ಮತ್ತು 1 ಬಿಲಿಯನ್ ಡಾಲರ್ ವ್ಯಾಪ್ತಿಯಲ್ಲಿ ಉದ್ಯಮ ಮೌಲ್ಯದ ಉದ್ದೇಶ ಇರಿಸಿಕೊಂಡಿದೆ. ಕಂಪನಿಯು ಚರ್ಚೆಯಲ್ಲಿರುವ ಕಂಪನಿಗಳ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದೆ. “ಮುಂದಿನ 12 ತಿಂಗಳಲ್ಲಿ ಎಸ್‌ಪಿಎಸಿ ಒಪ್ಪಂದವನ್ನು ಮಾಡಿಕೊಳ್ಳುವ ಗುರಿ ಹೊಂದಿದೆ” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕ ಉದ್ಯಮವು ತನ್ನ ಜಾಗತಿಕ ಖಾಸಗಿ ಷೇರು ಮತ್ತು ಆಪರೇಟರ್ ನೆಟ್‌ವರ್ಕ್ ಮೂಲಕ ತಲುಪಬಹುದಾದ ಹಲವು ಆಸಕ್ತಿದಾಯಕ ಸ್ವಾಧೀನ ಅವಕಾಶಗಳನ್ನು ಒದಗಿಸುತ್ತದೆ ಎಂದು ಜಿಸಿಎಸಿ ತಂಡ ನಂಬಿದೆ.

Advertisement

“ಇಂದು ಪ್ರತಿ ಕಂಪನಿಯು ತಂತ್ರಜ್ಞಾನ, ಪೂರೈಕೆ ಸರಪಳಿ ಮತ್ತು ಮಾರುಕಟ್ಟೆಗಳ ವಿಷಯದಲ್ಲಿ ತಮ್ಮ ವ್ಯವಹಾರವನ್ನು ಮರು ವಿಮರ್ಶೆಗೆ ಒಳಪಡಿಸಿದೆ.  ಇದು ನಮಗೆ ನಿರ್ದಿಷ್ಟ ಅವಕಾಶಗಳನ್ನು ಒದಗಿಸುತ್ತದೆ ಎಂದು ಜುರಿಚ್ ಮೂಲದ ಖಾಸಗಿ ಈಕ್ವಿಟಿ ಸಂಸ್ಥೆಯಾದ ಫಿಡ್ಸ್ ಬಿಸಿನೆಸ್ ಪಾರ್ಟ್‌ನರ್‌ನ ವ್ಯವಸ್ಥಾಪಕ ಪಾಲುದಾರ ಅಜಿಲಾ ಹೇಳಿದ್ದಾರೆ.

ಇವರು ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ ಒಂದು ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಿದ ಹೂಡಿಕೆ ಹೌಸಿ ಕ್ಯಾಪ್ವೆಂಟ್ ಎಜಿಯ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next