Advertisement
ದೇವು ಟೊಲ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ದೇವರಾಯ ಮಂಜುನಾಥ ಶೇರಿಗಾರ್ ಮಾತನಾಡಿ, ಪ್ರತಿಯೊಬ್ಬನಿಗೂ ಸಮಯ ಅಮೂಲ್ಯವಾದುದು. ಅದನ್ನು ಪರಿಣಾಮಕಾರಿಯಾಗಿ ಬಳಸುವುದು ಮುಖ್ಯ. ಕಠಿನ ಪರಿಶ್ರಮ ಮತ್ತು ಸಂಘಟಿತರಾಗುವ ಮೂಲಕ ಇದನ್ನು ಸಾಧಿಸಬಹುದು ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ. ನರೇಂದ್ರ ಪೈ ಅವರು ದೇವರಾಯ ಮಂಜುನಾಥ್ ಅವರನ್ನು ಅಭಿನಂದಿಸಿದರು.
ಪ್ರಸ್ತುತ ಡಾ| ಟಿಎಂಎ ಪೈ ಪಾಲಿಟೆಕ್ನಿಕ್ 8 ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ 3 ವರ್ಷಗಳ ಕೌಶಲಾಧಾರಿತ ಡಿಪ್ಲೊಮಾ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಮೆಕ್ಯಾನಿಕಲ್ ಮತ್ತು ಮೆಕಟ್ರಾನಿಕ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕರು, ಇತರ ಎಲ್ಲ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.ಪ್ರಾಧ್ಯಾಪಿಕೆ ಸಿಜಿ ಕೆ. ಸತ್ಯನ್ ಅತಿಥಿಗಳನ್ನು ಪರಿಚಯಿಸಿದರು. ಉಪ ನ್ಯಾಸಕರಾದ ಅಪರ್ಣಾ ನಾಯಕ್ ನಿರೂಪಿಸಿ, ಕಿಶನ್ ಸದಾಶಿವ ವಂದಿಸಿದರು. ತರಬೇತಿ, ಉದ್ಯೋಗಾವಕಾಶ
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ಉದ್ಯೋಗಾವ ಕಾಶಗಳನ್ನು ಒದಗಿಸುವ ಉದ್ದೇಶ ದಿಂದ ಒಡಂಬಡಿಕೆಗೆ ಸಹಿ ಹಾಕಲಾ ಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯಮ ಪಡೆಯಲು ಮತ್ತು ಮೆಕ್ಯಾ ನಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇತ್ತೀಚೆಗಿನ ತಂತ್ರಜ್ಞಾನಗಳನ್ನು ಕಲಿಯಲು ಇದು ಸಹಕಾರಿಯಾಗಿದೆ.