ಉಡುಪಿ: ಸಂವಹನ ಕೊರತೆ ಹಾಗೂ ಅಸಮರ್ಪಕ ಚಿಕಿತ್ಸೆಯಿಂದ ವೈದ್ಯಕೀಯ ಸಂಬಂಧಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸಾರ್ವಜನಿಕರಿಗೆ ವೈದ್ಯರ ಮೇಲೆ ಋಣಾತ್ಮಕ ಅಭಿಪ್ರಾಯ ಮೂಡಿಸುತ್ತಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಪ್ರೊ| ಬಿ.ಎನ್. ಗಂಗಾಧರ್ ತಿಳಿಸಿದ್ದಾರೆ.
ಮಣಿಪಾಲ ಮಾಹೆ, ಕಸ್ತೂರ್ಬಾ ಆಸ್ಪತ್ರೆ, ಕೆಎಂಸಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ವೈದ್ಯಕೀಯ ಚಿಕಿತ್ಸೆ ನಿಷ#ಲವಾದಾಗ ರೋಗಿಗೆ ನೀಡಬಹುದಾದ ಜೀವರಕ್ಷಕಗಳ ಕುರಿ ತಾದ ಮಾರ್ಗದರ್ಶಿ ಸೂತ್ರವನ್ನು ಒಳಗೊಂಡ ಬ್ಲೂಮೇಪಲ್ ಕೈಪಿಡಿ ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಣಿಪಾಲ ಆಸ್ಪತ್ರೆಯವರು ಮಾರಣಾಂತಿಕ ಕಾಯಿಲೆಯಿಂದ ನರಳುವ ಹಾಗೂ ಸಾವಿಗೆ ಹತ್ತಿರದಲ್ಲಿ ಇರುವ ರೋಗಿಗಳಿಗೆ ನೀಡಬಹುದಾದ ಚಿಕಿತ್ಸೆಗಳ ಕುರಿತು ರಚಿಸಿರುವ ಮಾರ್ಗ ಸೂತ್ರಗಳು ಶ್ಲಾಘನೀಯ ಎಂದರು.
ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವ ರೋಗಿಗೆ ಅನವಶ್ಯಕ ತೊಂದರೆ ಹಾಗೂ ಖರ್ಚು ಮಾಡದೆ ಉತ್ತಮ ರೀತಿಯಲ್ಲಿ ಬದುಕನ್ನು ಕೊನೆಗಾಣಿಸುವ ವ್ಯವಸ್ಥಿತ ವಿಧಾನದ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹರ್ಷ ವ್ಯಕ್ತಪಡಿಸಿದರು.
ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಮಾತನಾಡಿ, ಎಷ್ಟೇ ಅತ್ಯಾ ಧುನಿಕ ಚಿಕಿತ್ಸೆ ಒದಗಿಸಿದರೂ ಚಿಕಿತ್ಸೆಯ ಬಗ್ಗೆ ರೋಗಿ ಮತ್ತು ಅವರ ಕುಟುಂಬದವರಿಗೆ ಮಾಹಿತಿ ನೀಡು ವುದು ಅಷ್ಟೇ ಮುಖ್ಯ ಎಂದರು.
ಕೆಎಂಸಿ ಡೀನ್ ಡಾ| ಪ್ರಜ್ಞಾ ರಾವ್, ಆಸ್ಪತ್ರೆಯ ಮುಖ್ಯನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಔಷಧಿ ವಿಭಾಗದ ಮುಖ್ಯಸ್ಥ ಡಾ| ನವೀನ್, ಕರುಣಾಶ್ರಯ ವೈದ್ಯಕೀಯ ಅಧೀಕ್ಷಕ ಡಾ| ನಾಗೇಶ್ ಉಪಸ್ಥಿತರಿದ್ದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಸ್ವಾಗತಿಸಿ, ಉಪ ವೈದ್ಯಕೀಯ ಅಧೀಕ್ಷಕ ಡಾ| ಪದ್ಮ ರಾಜ್ ಹೆಗ್ಡೆ ವಂದಿಸಿದರು.