Advertisement

ಮಣಿಪಾಲ ಹಾಗೂ ಸುತ್ತಮುತ್ತ ಪಕ್ಷಿಗಳ ಸಂತತಿ ಕ್ಷೀಣ;ಬರ್ಡ್ಸ್‌ ಕ್ಲಬ್‌ ಸರ್ವೆ

07:21 PM Feb 02, 2020 | Sriram |

ಉಡುಪಿ: ಮಣಿಪಾಲ ಹಾಗೂ ಆಸುಪಾಸು ಪ್ರದೇಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಕ್ಷಿಗಳ ಸಂತತಿ ಕ್ಷೀಣಿಸಿದೆ. ಹೊಸ ಪ್ರಭೇದ ಕಂಡುಬಂದಿಲ್ಲ. ಕಳೆದ 11 ವರ್ಷಗಳಿಂದ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿರುವ ಮಣಿಪಾಲ ಬರ್ಡ್ಸ್‌ ಕ್ಲಬ್‌ ನಡೆಸಿದ ಪಕ್ಷಿ ವೀಕ್ಷಣೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

Advertisement

ಅಭಿವದ್ಧಿ ಕಾರಣಕ್ಕೆ ವಿವಿಧೆಡೆ ಮರಗಳನ್ನು ಕಡಿಯಲಾಗಿದೆ. ಹಣ್ಣಿನ ಮರಗಳ ಕೊರತೆ ಇದೆ. ವಿವಿಧ ಮಾಲಿನ್ಯಗಳಿಂದ ಪಕ್ಷಿಗಳ ಸಂತತಿ ನಾಶಕ್ಕೆ ಮೂಲಕ ಕಾರಣಗಳಾಗಿವೆ.
ಕ್ಲಬ್‌ ವತಿಯಿಂದ ರವಿವಾರ ಪಕ್ಷಿ ವೀಕ್ಷಣೆಯನ್ನು ಸರಳೇಬೆಟ್ಟು, ಎಂಡ್‌ ಪಾಯಿಂಟ್‌, ಇಂದ್ರಾಳಿ, ಶೆಟ್ಟಿಬೆಟ್ಟು, ಕರ್ವಾಲು ಡಂಪಿಂಗ್‌ ಯಾರ್ಡ್‌, ದಶರಥ ನಗರ, ಶಾಂತಿನಗರ, ಹೆರ್ಗ ಮುಂತಾದ ಸ್ಥಳಗಳು ಸೇರಿದಂತೆ 15 ಕಡೆಗಳಲ್ಲಿ ನಡೆಸಲಾಯಿತು. ಮಣಿಪಾಲದಲ್ಲಿ 2019ರಲ್ಲಿ 137 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದ್ದು, ಈ ವರ್ಷ 125 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ.

ಪ್ರತಿ ವರ್ಷ ಫೆಬ್ರವರಿ ಮೊದಲ ರವಿವಾರ ಬರ್ಡ್ಸ್‌ ಕ್ಲಬ್‌ ವತಿಯಿಂದ ಮಣಿಪಾಲದಲ್ಲಿ ಪಕ್ಷಿಗಳ ದಿನಾಚರಣೆ ನಡೆಯುತ್ತಿದೆ. ಆಸಕ್ತಿ ಉಳ್ಳವರು ಇದಕ್ಕೆ ಬರಬಹುದು. ಯಾವುದೇ ಸದಸ್ಯ ಶುಲ್ಕ ಇರುವುದಿಲ್ಲ. 5ರಿಂದ 70ರ ವಯಸ್ಸಿನವರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಲಬ್‌ನಲ್ಲಿ 500 ಮಂದಿ ಇದ್ದು ಈ ಬಾರಿ 150 ಮಂದಿ ಪಾಲ್ಗೊಂಡಿದ್ದರು. ಪಕ್ಷಿ ಪ್ರೇಮಿಗಳು, ಹವ್ಯಾಸಿ ಛಾಯಾಚಿತ್ರಗ್ರಾಹಕರು ತಂಡದಲ್ಲಿದ್ದರು.

ವಿದೇಶಿ ಹಕ್ಕಿಗಳು ಬರುತ್ತಿವೆ
ಪ್ರತಿವರ್ಷ ಟಿಬೆಟ್‌, ಸರ್ಬಿಯ, ಇಂಗ್ಲೆಂಡ್‌, ಮಂಗೋಲಿಯ ಮೊದಲಾದ ಹೊರ ದೇಶಗಳಿಂದ ಗೋಲ್ಡನ್‌, ಓರಿಯಲ್‌, ಪ್ಯಾರಡೈಸ್‌, ಪ್ಲೋಕ್ಯಾಚರ್‌, ವಾಬುÉಡ್ಸ್‌ ಹಾಗೂ ಸಮುದ್ರ ತೀರದಲ್ಲಿ ನ ವೇಡರ್ ಹೀಗೆ ವಿವಿಧ ಜಾತಿಯ ಪಕ್ಷಿಗಳು ಈ ಭಾಗದಲ್ಲಿ ಕಂಡುಬರುತ್ತವೆ. ಅವುಗಳು ಹೆಚ್ಚಾಗಿ ಅಕ್ಟೋಬರ್‌-ಫೆಬ್ರವರಿ ನಡುವಿನ ಅವಧಿಯಲ್ಲಿ ಕಾಣ ಸಿಗುತ್ತವೆ.

ಕಾಗೆಗಳು ಕಾಣಿಸುತ್ತಿಲ್ಲ
ಪಕ್ಷಿಗಳಿಗೆ ವಾಸ ಮಾಡಲು ಮರಗಳು ಬೇಕು. ಇತ್ತೀಚಿನ ವರ್ಷಗಳಲ್ಲಿ ಕಾಗೆಗಳ ಸಂತತಿ ಕಡಿಮೆಯಾಗಿದೆ. ಮೈನಾ ಹಕ್ಕಿ ಜಾಸ್ತಿ ಆಗಿದೆ ಎನ್ನುವ ಅಂಶ ಕೂಡ ವೀಕ್ಷಣೆ ಸಂದರ್ಭ ಅರಿವಿಗೆ ಬಂದಿದೆ.

Advertisement

ಬೇಸಗೆಯಲ್ಲಿ ಬರ್ಡ್ಸ್‌ಬಾತ್‌ ಬೇಕು
ಪಕ್ಷಿಗಳ ಉಳಿವಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಹಕ್ಕಿಗಳಿಗೆ ನೀರು ಬಹುಮುಖ್ಯವಾಗಿ ಆವಶ್ಯಕ. ಬೇಸಗೆಯಲ್ಲಿ ನೀರಿಲ್ಲದೆ ಅವುಗಳು ಕೊರಗುತ್ತವೆ. ಹೀಗಾಗಿ ಪ್ರತಿ ಮನೆಗಳಲ್ಲಿ ಬರ್ಡ್ಸ್‌ ಬಾತ್‌ ನಿರ್ಮಿಸಿದಲ್ಲಿ ಸೂಕ್ತ. ಕನಿಷ್ಠ ತೆಂಗಿನ ಗಿರಟೆಯಂತಹ ಸಾಮಾನ್ಯ ವಸ್ತುಗಳಿಂದ ಅವುಗಳಿಗೆ ನೀರು ಒದಗಿಸುವತ್ತ ಗಮನಹರಿಸಬೇಕು.
-ನಾಗೇಂದ್ರ ನಾಯಕ್‌, ಅಮ್ಮುಂಜೆ, ಪಕ್ಷಿ ಪ್ರಿಯರು

ಪ್ರಾತ್ಯಕ್ಷಿಕೆ, ಕಾರ್ಯಾಗಾರ
ಮಣಿಪಾಲ ಕೆ.ಎಂ.ಸಿ ಫ‌ುಡ್‌ ಕೋರ್ಟ್‌ನ ಎರಡನೇ ಮಹಡಿಯಲ್ಲಿ ಪಕ್ಷಿಗಳ ಕುರಿತು ಕಾರ್ಯಾಗಾರ ನಡೆಯಿತು. ಅಧ್ಯಯನಶೀಲ ವ್ಯಕ್ತಿಗಳು ವಿಚಾರ ಮಂಡಿಸಿದರು. ಬೆಂಗಳೂರಿನ ಐಟಿ ಉದ್ಯೋಗಿ ಹವ್ಯಾಸಿ ಫೋಟೋಗ್ರಾಫ‌ರ್‌ ಆದಿತ್ಯ ಭಟ್‌ ವಿವಿಧ ಬಣ್ಣಗಳ 18 ಜಾತಿಯ ಪಕ್ಷಿಗಳ ಚಿತ್ರಗಳನ್ನು ಬಿಡಿಸಿದರು. ಪಕ್ಷಿಗಳ ಜೀವನಪದ್ಧತಿ, ಆಹಾರಪದ್ಧತಿ, ಚಲನವಲನ ಕುರಿತು ದೃಶ್ಯಾವಳಿಗಳನ್ನು ಪರದೆ ಮೂಲಕ ತೋರಿಸಲಾಯಿತು. ಕ್ಲಬ್‌ನ ನಾಗೇಂದ್ರ ನಾಯಕ್‌, ತೇಜಸ್ವಿ ಎಸ್‌. ಆಚಾರ್ಯ. ಪ್ರಭಾಕರ ಶಾಸ್ತ್ರಿ , ಮೋಹಿತ್‌ ಶೆಣೈ, ವೃಂದಾ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next