Advertisement
ಈ ಮನ್ನಣೆಯು ಆಸ್ಪತ್ರೆಯ ಆರೋಗ್ಯ ಸೇವೆಗಳು, ವೈದ್ಯಕೀಯ ಸಂಶೋಧನೆಗಳು ಮತ್ತು ಆರೋಗ್ಯ ವಿತರಣೆಗೆ ಅದರ ಸಹಾನುಭೂತಿಯ ವಿಧಾನದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಿದೆ.
ವಿವಿಧ ಕಾರ್ಯವಿಧಾನಗಳ ಮೂಲಕ 10,000ಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಲಭಗೊಳಿಸುವಲ್ಲಿ ಮಾರ್ಕ್ ಪ್ರಮುಖ ಪಾತ್ರ ವಹಿಸಿದೆ, ಮೊದಲ ಐವಿಎಫ್ ಮಗುವಿಗೆ ಈಗ 25 ವರ್ಷ.
Related Articles
Advertisement
ತಂಡದ ಸಮರ್ಪಣೆ ಮತ್ತು ವೈದ್ಯರ ಪರಿಣತಿ ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದೆ ಎಂದರು.
ಸಿಒಒ ಸಿ.ಜಿ. ಮುತ್ತಣ್ಣ , ಮಾಹೆ ಭೋದನ ಆಸ್ಪತ್ರೆಗಳ ಸಿಒಒ ಡಾ| ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಹಾಗೂ ಮಾರ್ಕ್ ತಂಡದವರು ಉಪಸ್ಥಿತರಿದ್ದರು.
ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ| ಪ್ರತಾಪ್ ಕುಮಾರ್ ಪ್ರಸ್ತಾವನೆಗೈದು ಐವಿಎಫ್ ಸೇವೆ ಬೆಳೆದುಬಂದ ದಾರಿಯನ್ನು ವಿವರಿಸಿದರು.
ಮಾರ್ಕ್ ನಲ್ಲಿ ಪ್ರಾದ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ಡಾ| ಸತೀಶ್ ಅಡಿಗ ಅವರು ತಮ್ಮ ನುರಿತ ಭ್ರೂಣಶಾಸ್ತ್ರಜ್ಞರ ತಂಡದೊಂದಿಗೆ ಟೆಸ್ಟ್ ಟ್ಯೂಬ್ ಬೇಬಿ ಕಾರ್ಯವಿಧಾನಗಳ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಪ್ರಾಧ್ಯಾಪಕರಾದ ಡಾ| ಪ್ರಶಾಂತ್ ಕೆ. ಅಡಿಗ, ಸಹಪ್ರಾಧ್ಯಾಪಿಕೆ ಡಾ| ಅಂಜಲಿ ಸುನೀಲ್ ಮುಂಡ್ಕೂರ್, ಸಹಪ್ರಾಧ್ಯಾಪಕಿ ಡಾ| ವಿದ್ಯಾಶ್ರೀ ಜಿ. ಪೂಜಾರಿ ಇದ್ದರು.