Advertisement

100 m. Race: ಬೈಂದೂರಿನ ಮಣಿಕಂಠ ಹೋಬಳಿದಾರ್ ಭಾರತದ ವೇಗದ ಓಟಗಾರ

11:24 AM Oct 16, 2023 | Team Udayavani |

ಉಪ್ಪುಂದ: ಅರವತ್ತೆರಡನೇ ರಾಷ್ಟ್ರೀಯ ಮುಕ್ತ ಆ್ಯತ್ಲೆಟಿಕ್‌ ಚಾಂಪಿಯನ್‌ ಶಿಪ್‌ ನಲ್ಲಿ ಸರ್ವೀಸಸ್‌ ತಂಡವನ್ನು ಪ್ರತಿನಿಧಿಸಿದ ಮಣಿಕಂಠ ಹೋಬಳಿದಾರ್‌ ಅವರು ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ.

Advertisement

ಗ್ರಾಮೀಣ ಪ್ರದೇಶದ ಈ ಯುವಕ ವಿಶೇಷ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. 21 ವರ್ಷದ ಮಣಿಕಂಠ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನವರು. ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿ ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:IT Raid; ಹೈಕಮಾಂಡ್ ನಯಾ ಪೈಸೆ ಹಣವನ್ನು ಕೇಳಿಲ್ಲ, ಬಿಜೆಪಿ ಆರೋಪ ಸುಳ್ಳು: ಸಿದ್ದರಾಮಯ್ಯ

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 62ನೇ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಓಪನ್‌ ಚಾಂಪಿಯನ್‌ಶಿಪ್‌ನ ಪುರುಷರ 100 ಮೀ. ಸ್ಪರ್ಧೆಯ ಸೆಮಿಫೈನಲ್‌ ನಲ್ಲಿ ಮಣಿಕಂಠ ಈ ಸಾಧನೆಗೈದರು. ಕೇವಲ 10.23 ಸೆಕೆಂಡ್‌ಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ತಲುಪಿದ್ದರು.

Advertisement

2016ರಲ್ಲಿ ಹೊಸದಿಲ್ಲಿ ಯಲ್ಲಿ ನಡೆದ ರಾಷ್ಟ್ರೀಯ ಫೆಡರೇಶನ್‌ ಕಪ್‌ ನಲ್ಲಿ ಅಮಿಯಾ ಮಲ್ಲಿಕ್‌ (10.26 ಸೆ.) ಸ್ಥಾಪಿಸಿದ ದಾಖಲೆ ಪತನಗೊಂಡಿತು.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಹೋಬಳಿದಾರ್‌ ಅವರ ದೊಡ್ಡ ಕನಸು. ಮಣಿಕಂಠ ಅವರು 2006ರ ಏಷನ್‌ ಗೇಮ್ಸ್‌ನಲ್ಲಿ 4 x400 ಮೀ. ರಿಲೇ ತಂಡದೊಂದಿಗೆ ಬೆಳ್ಳಿ ಪದಕ ಗೆದ್ದ ಟಿ. ಅಬೂಬಕರ್‌ ಅವರಿಂದ ತರಬೇತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next