Advertisement

ಮಣಿಕಾ ಗುರಿ ಟಾಪ್‌-30

06:00 AM Dec 25, 2018 | Team Udayavani |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಜಯಿಸಿದ ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಈಗ ಒಲಿಂಪಿಕ್ಸ್‌ಗೆ ತಯಾರಾಗುತ್ತಿದ್ದಾರೆ. ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ರ್‍ಯಾಂಕಿಂಗ್‌ನಲ್ಲಿ ಅಗ್ರ 30ರಲ್ಲಿ ಸ್ಥಾನ ಸಂಪಾದಿಸುವ ಗುರಿ ಹೊಂದಿದ್ದಾರೆ.

Advertisement

“ಎಲ್ಲರಿಗೂ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸಿರುತ್ತದೆ. ಇದಕ್ಕೆ ನಾನೂ ಹೊರತಲ್ಲ. ಆದರೆ ಹಂತ ಹಂತವಾಗಿ ನಾನು ಮುಂದುವರಿಯಲು ಇಷ್ಟಪಡುತ್ತೇನೆ. ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಲು ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನ ಹರಿಸುತ್ತಿದ್ದೇನೆ. ಒಲಿಂಪಿಕ್ಸ್‌ ಗೇಮ್ಸ್‌ಗೆ ನೇರ ಅರ್ಹತೆ ಸಂಪಾದಿಸಲು ನಾನು ರ್‍ಯಾಂಕಿಂಗ್‌ನಲ್ಲಿ ಅಗ್ರ 30ರಲ್ಲಿ ಸ್ಥಾನ ಗಳಿಸಬೇಕಾಗಿದೆ’ ಎಂದು ಮಣಿಕಾ ಬಾತ್ರಾ ಹೇಳಿದರು.

“ಏಶ್ಯನ್‌ ಗೇಮ್ಸ್‌ ಮುಗಿದ ಬೆನ್ನಲ್ಲೇ ಒಲಿಂಪಿಕ್ಸ್‌ಗೆ ನಾನು ತಯಾರಿ ನಡೆಸಲಾರಂಭಿಸಿದ್ದು, ಈ ತರಬೇತಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈಗ ವಿದೇಶಿ ಆಟಗಾರರಿಗೆ ನನ್ನ ಆಟದ ವೈಖರಿಯ ಬಗ್ಗೆ ತಿಳಿದಿದೆ. ಹೀಗಾಗಿ ನನ್ನ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನನ್ನ ಶೈಲಿ ವಿಭಿನ್ನವಾಗಿರಬೇಕೆಂಬ ಕಾರಣಕ್ಕೆ ನಾನು ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏಶ್ಯದ ಪ್ರತಿಸ್ಪರ್ಧಿಗಳನ್ನು ಸೋಲಿಸಲು ನಾನು ಫಿಟ್‌ ಆಗಿರಬೇಕು. ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next