Advertisement

Manika Batra; ಟೋಕಿಯೋದಲ್ಲಿ ಮಾಡಿದ ತಪ್ಪು ಮತ್ತೆ ಮಾಡಲಾರೆ

11:43 PM Jul 22, 2024 | Team Udayavani |

ಹೊಸದಿಲ್ಲಿ: ಟೋಕಿಯೋದಲ್ಲಿ ಮಾಡಿದ ತಪ್ಪನ್ನು ತಾನು ಮತ್ತೆ ಮಾಡಲಾರೆ ಎಂದು ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಹೇಳಿದ್ದಾರೆ.

Advertisement

“ಕಳೆದ ಒಲಿಂಪಿಕ್ಸ್‌ನಲ್ಲಿ ನಾನು ಸಾಕಷ್ಟು ಸಂಗತಿಗಳನ್ನು ಕಲಿತೆ. ಅಲ್ಲಿನ ಸ್ಪರ್ಧೆಗಳ ವೇಳೆ ಕೆಲವು ತಪ್ಪುಗಳಾದವು. ಅದೊಂದು ಪಾಠ. ಅದನ್ನಿಲ್ಲಿ ಪುನರಾವರ್ತಿಸಲಾರೆ. ನನ್ನ ಮನಸ್ಥಿತಿ ಬದಲಾಗಿದೆ. ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇನೆ. ಸದ್ಯ ಒಂದೊಂದೇ ಪಂದ್ಯದತ್ತ ಗಮನ ಹರಿಸುವೆ. ಆರಂಭದಲ್ಲೇ ಪದಕದ ಬಗ್ಗೆ ಯೋಚಿಸಲಾರೆ. ಆದರೆ ನನ್ನ ಅಂತಿಮ ಗುರಿ ಪದಕವೊಂದನ್ನು ಗೆಲ್ಲುವುದೇ ಆಗಿದೆ’ ಎಂದರು.

ಮಣಿಕಾ ಬಾತ್ರಾ ಕಳೆದ ಟೋಕಿಯೊ ಒಲಿಂಪಿಕ್ಸ್‌ ವನಿತಾ ಸಿಂಗಲ್ಸ್‌ನಲ್ಲಿ 3ನೇ ಸುತ್ತು ತಲುಪಿ, ಅಲ್ಲಿ ಎಡವಿದ್ದರು. ಈ ಬಾರಿ ಮೊದಲ ಬಾರಿ ವನಿತಾ ತಂಡ ಕೂಡ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿದೆ. ಇದರಿಂದ ಒಟ್ಟು ಸೇರಿ ಅಭಾಸ್ಯ ನಡೆಸಬಹುದಾಗಿದೆ ಎಂಬುದು ಮಣಿಕಾ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next