Advertisement

ಸೈಕೋ ಥ್ರಿಲ್ಲರ್‌ “ಮೇನಿಯಾ”

02:06 PM Jun 01, 2022 | Team Udayavani |

ಸೈಕೋ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈ ಮೂಲಕ ಪ್ರೇಕ್ಷಕರಿಗೆ ಥ್ರಿಲ್‌ ನೀಡುವ ಪ್ರಯತ್ನ ಆ ಸಿನಿಮಾಗಳದ್ದು. ಈಗ ಅದೇ ಸಾಲಿಗೆ ಸೇರುವ ಚಿತ್ರ “ಮೇನಿಯಾ-ಸಿನ್ಸ್‌ 1999′. ಇದು ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ.

Advertisement

ಜುಲೈನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ನ ನಾಯಕ ಸ್ವಸ್ತಿಕ್‌ ಆರ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡಿದೆ. ಮಧು.ಎಸ್‌ ಈ ಚಿತ್ರದ ನಿರ್ದೇಶಕರು. ಲೂಸ್‌ ಮಾದ ಯೋಗಿ ಅಭಿನಯದ ಲಂಕೆಸೇರಿದಂತೆ ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಧು ಎಸ್‌, ದೊರೆ – ಭಗವಾನ್‌ ಅವರ ಇನ್ಸ್ಟಿಟ್ಯೂಟ್‌ ನಲ್ಲಿ ನಿರ್ದೇಶನ ತರಬೇತಿ ಸಹ ಪಡೆದಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಧು ಅವರೆ ಬರೆಯುತ್ತಿದ್ದಾರೆ. ಇದು ಮಧು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ಸ್ವಸ್ತಿಕ್‌ ಆರ್ಯ ಈ ಚಿತ್ರದ ನಾಯಕ. ರಂಗ ನಾಯಕಿ ಧಾರಾವಾಹಿಯಲ್ಲಿ ನಟಿಸಿರುವ ಇವರು, ವಿಜಯ್‌ ಪ್ರಕಾಶ್‌ ಹಾಡಿರುವ ಜಿಯಾ ಆಲ್ಬಂ ನಲ್ಲೂ ಅಭಿನಯಿಸಿದ್ದಾರೆ.

ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಆಲ್ಬಂ ಸಾಂಗ್‌ ಮೂಡಿ ಬಂದಿತ್ತು. ಸ್ವಸ್ತಿಕ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಾಯಕ ಸ್ವಸ್ತಿಕ್‌ ಆರ್ಯ ಅವರು ಅರುಣ್‌ ಭಟ್‌ ಅವರೊಡಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಬೆಂಗಳೂರು- ಮಂಗಳೂರಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.  ಎರಡು ಹಾಡುಗಳಿರುತ್ತದೆ. ವಿಶಾಲ್‌ ಕುಮಾರ್‌ ಗೌಡ ಛಾಯಾಗ್ರಾಹಕರಾಗಿ ಹಾಗೂ ಮಧು ತುಂಬಕೆರೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next