Advertisement

ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ: ನಾೖಕ್‌

09:02 AM Jan 06, 2019 | |

ಮಾಣಿ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಹಾಗೂ ಮಾಣಿ ಶ್ರೀ ದುರ್ಗಾ ಜಿಮ್ನಾಶಿಯಂ ಆಶ್ರಯದಲ್ಲಿ ರಾಜ್ಯ ಸಬ್‌ ಜೂನಿಯರ್‌ ಬಾಲಕ-ಬಾಲಕಿಯರ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗಳು -2019 ಇದರ ಉದ್ಘಾಟನ ಸಮಾರಂಭವು ಬಾಲವಿಕಾಸ ಆಂಗ್ಲ ಮಾ. ಶಾಲೆಯಲ್ಲಿ ಜರಗಿತು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿ ಗುತ್ತು ಮಾತನಾಡಿ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾ ಗುತ್ತಿವೆ. ಮಾಣಿಯಂತಹ ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿನ ಯುವ ಪ್ರತಿಭೆಗಳಿಗೆ ಇಂತಹ ಸ್ಪರ್ಧೆ ಉತ್ತಮ ವೇದಿಕೆ. ಕಠಿನ ಪರಿಶ್ರಮದಿಂದ ಉತ್ತಮ ಸಾಧನೆಗೈದಾಗ ಶಾಲೆಯ ಜತೆಗೆ ದೇಶಕ್ಕೆ ಹೆಸರು ತರಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಸ್ತು, ಸಂಯಮ, ಕ್ರೀಡಾ ಮನೋಭಾವ ಅತೀ ಅಗತ್ಯ. ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಪ್ರತಿಭೆಗಳಿಗೆ ಜಿ.ಪಂ. ವತಿಯಿಂದ ಸರ್ವ ರೀತಿಯ ಸಹಕಾರ ಗಳನ್ನು ಕೊಡಿಸಲು ಬದ್ಧಳಾಗಿದ್ದೇನೆ ಎಂದು ಆಶ್ವಾಸನೆ ನೀಡಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆ
ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಸೇರಿದಾಗ ವ್ಯಕ್ತಿತ್ವ ವಿಕಸನ ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹಲವಾರು ರೂಪದಲ್ಲಿರಬಹುದು. ಆ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಶಿಕ್ಷಕರ ಹಾಗೂ ಹೆತ್ತವರ ಆದ್ಯ ಕರ್ತವ್ಯವಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next