Advertisement
ಈ ಹಿಂದೆ ಹೆದ್ದಾರಿ ಪ್ರಾಧಿಕಾರ ನೀಡಿದ ಮಾಹಿತಿಯ ಅನ್ವಯ 2018ರ ಮಾರ್ಚ್ ಮೊದಲ ವಾರದಲ್ಲಿ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 275 ಆಗಿ ಮೇಲ್ದರ್ಜೆಗೇರಬೇಕಿತ್ತು. ರಸ್ತೆ ನಿರ್ವಹಣೆ ಸಮರ್ಪಕ ಆಗದ ಕಾರಣಕ್ಕೆ ಪ್ರಾಧಿಕಾರ ಈ ರಸ್ತೆಯನ್ನು ತನ್ನ ಅಧೀನಕ್ಕೆ ಪಡೆದುಕೊಳ್ಳಲಿಲ್ಲ. ದುರಸ್ತಿ ನಡೆಸಿ ಎಪ್ರಿಲ್ ನಲ್ಲಿ ಹಸ್ತಾಂತರಿಸುವ ಬಗ್ಗೆ ಕೆಆರ್‌ಡಿಸಿಎಲ್ ಅಧಿಕಾರಿಗಳು ಉತ್ತರ ನೀಡಿದ್ದರು. ಆದರೆ ಈಗ ಜೂನ್ ತಿಂಗಳು ಆರಂಭವಾದರೂ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ.
ಮೈಸೂರಿನಿಂದ ಸಂಪಾಜೆ ತನಕದ ರಾಜ್ಯ ಹೆದ್ದಾರಿಯನ್ನು ಮೂರು ಹಂತಗಳಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಅಂತಿಮ ಹಂತದ ಸಂಪಾಜೆ-ಮಾಣಿ ತನಕದ ರಸ್ತೆ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಮೂರು ವರ್ಷ ವಿಳಂಬಗೊಂಡಿತ್ತು. ಕಾಮಗಾರಿ ಮುಗಿದರೂ ಗುತ್ತಿಗೆದಾರ ಸಂಸ್ಥೆಯ ನಿರ್ವ ಹಣ ಅವಧಿ ಪೂರ್ಣಗೊಳ್ಳದ ಕಾರಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯ ನ್ನು ತನ್ನ ಸುಪರ್ದಿಗೆ ಪಡೆದಿರಲಿಲ್ಲ. ಮಾಣಿಯಿಂದ ಮೈಸೂರು ತನಕದ 212 ಕಿ. ಮೀ. ರಾಜ್ಯ ಹೆದ್ದಾರಿ 88ರ ವಿಸ್ತರಣೆ, ಅಭಿವೃದ್ಧಿ ಕಾಮಗಾರಿ 2009 ರಲ್ಲಿ ಆರಂಭಗೊಂಡು 2015ರಲ್ಲಿ ಪೂರ್ಣಗೊಂಡಿತ್ತು. ಮೊದಲ ಹಂತದಲ್ಲಿ ಮೈಸೂರು-ಕುಶಾಲನಗರ, ಕುಶಾಲ ನಗರ- ಸಂಪಾಜೆ, ಸಂಪಾಜೆ- ಮಾಣಿ, ಎರಡನೇ ಹಂತದಲ್ಲಿ ಮೈಸೂರು- ಕುಶಾಲನಗರ ರಸ್ತೆ 2009ರಲ್ಲಿ, ಮೂರನೇ ಹಂತದಲ್ಲಿ ಕುಶಾಲನಗರ-ಸಂಪಾಜೆ ರಸ್ತೆ 2012ರಲ್ಲಿ ಪೂರ್ಣಗೊಂಡಿತ್ತು.
Related Articles
ರಾಜ್ಯ ಹೆದ್ದಾರಿ 88 ಆಗಿದ್ದು, ಕೆಆರ್ ಡಿಸಿ ಎಲ್ ವ್ಯಾಪ್ತಿಯಲ್ಲಿದ್ದ ರಸ್ತೆಯನ್ನು 2013ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಮೈಸೂರಿನಿಂದ -ಕುಶಾಲನಗರ-ಸಂಪಾಜೆ ತನಕದ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು. 2012ರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮೇಲ್ದರ್ಜೆಗೇರಿದರೂ ನಿರ್ವಹಣೆ ಅವಧಿ ಕೊನೆಗೊಳ್ಳದ ಕಾರಣ ಹಸ್ತಾಂತರ ಬಾಕಿ ಇರಿಸಲಾಗಿತ್ತು.
Advertisement
ಚರಂಡಿ ವಿರುದ್ಧ ದೂರುಹೆದ್ದಾರಿ ಇಕ್ಕೆಲದ ಚರಂಡಿ, ಫುಟ್‌ಪಾತ್, ಬಸ್‌ಬೇ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರಿಕ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸ್ಪಷ್ಟ ಉತ್ತರವಿಲ್ಲ
ವಿಳಂಬದ ಕುರಿತು ಕೆಆರ್‌ಡಿಸಿಎಲ್ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ. ಮುಂದಿನ ವಾರ ಹಸ್ತಾಂತರ ಆರಂಭಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಈ ಹಿಂದೆ ಎರಡು ಬಾರಿ ಮುಂದೂಡಿಕೆ ಸಂದರ್ಭದಲ್ಲೂ ಇದೇ ಉತ್ತರವಿತ್ತು. ‘ನಿರ್ವಹಣೆ ಪೂರ್ಣಗೊಂಡ ಅನಂತರ ನಾವು ಪರಿಶೀಲನೆ ನಡೆಸುತ್ತೇವೆ. ಸಮರ್ಪಕವಾಗಿದ್ದರೆ, ಸುಪರ್ದಿಗೆ ಪಡೆದುಕೊಳ್ಳುತ್ತೇವೆ’ ಎನ್ನುತ್ತಾರೆ ರಾಷ್ಟ್ರೀಯ ಪ್ರಾಧಿಕಾರದವರು. ಕಿರಣ್ ಪ್ರಸಾದ್ ಕುಂಡಡ್ಕ