Advertisement

Hosanagar; ಮಾಣಿ ಜಲಾಶಯ:ವಾರಾಹಿ,ಹಾಲಾಡಿ ನದಿಪಾತ್ರದ ವಾಸಿಗಳಿಗೆ ಅಂತಿಮ ಮುನ್ನೆಚ್ಚರಿಕೆ

08:40 PM Sep 12, 2024 | Vishnudas Patil |

ಹೊಸನಗರ: ಯಡೂರಿನ ಮಾಣಿ ಜಲಾಶಯದ ನೀರಿನ ಮಟ್ಟ ಏರುತ್ತಿದ್ದು ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇದ್ದು ಸುರಕ್ಷತೆ ದೃಷ್ಟಿಯಿಂದ ಅಂತಿಮ ಮುನ್ನೆಚ್ಚರಿಕೆ ನೀಡಲಾಗಿದೆ.

Advertisement

ಯಡೂರಿನ ಮಾಣಿಯಲ್ಲಿರುವ 594.36 ಮೀ ಗರಿಷ್ಠ ಮಟ್ಟದ ಜಲಾಶಯದಲ್ಲಿ ನೀರಿನ ಮಟ್ಟ ಗುರುವಾರ(ಸೆ 12) ಬೆಳಗ್ಗೆ ತನಕ 591.90 ಮೀ ತಲುಪಿದೆ. 2642 ಕ್ಯೂಸೆಕ್ಸ್ ಒಳಹರಿವು ಇದೆ. ಮಳೆ ಮುಂದುರೆದಿದ್ದು ನೀರಿನ ಹರಿವು ಕೂಡ ಇದೇ ರೀತಿ ಮುಂದುವರೆದಲ್ಲಿ ಮಾಣಿ ಜಲಾಶಯದಿಂದ ನೀರನ್ನು ಹೊರಬಿಡಲಾಗುವುದು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.

ಅಣೆಕಟ್ಟಿನ ಕೆಳದಂಡೆಯಲ್ಲಿ, ವಾರಾಹಿ, ಹಾಲಾಡಿ ನದಿ ಪಾತ್ರದ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರು ವಗೈರೆ ಜೊತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಮಾಸ್ತಿಕಟ್ಟೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ಕಾಮಗಾರಿ) ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next