Advertisement
ರಾ.ಹೆ. ಯ ಮಾಣಿ-ಸಂಪಾಜೆ ವ್ಯಾಪ್ತಿಯ 71.6 ಕಿ.ಮೀ. ರಸ್ತೆಯನ್ನು ಎರಡು ವಿಭಾಗಗಳಲ್ಲಿ ಮರು ಡಾಮರು ಕಾಮಗಾರಿ ನಡೆಸಲಾಗುತ್ತಿದೆ. 0-40 ಕಿ.ಮೀ. ವ್ಯಾಪ್ತಿಯ ಮಾಣಿಯಿಂದ ಜಾಲೂÕರು ಹಾಗೂ ಹಾಗೂ ಜಾಲಸೂರಿನಿಂದ ಸಂಪಾಜೆ ತನಕದ 31.6 ಕಿ.ಮೀ. ರಸ್ತೆಯನ್ನು ಪ್ರತ್ಯೇಕ ಟೆಂಡರ್‌ಗಳಿಗೆ ವಹಿಸಲಾಗಿದೆ. 0-40 ಕಿ.ಮೀ. ತನಕ 14 ಕೋಟಿ ರೂ. ಹಾಗೂ ಹಾಗೂ ಅನಂತರದ 31.6 ಕಿ.ಮೀ. ವ್ಯಾಪ್ತಿಗೆ 10.23 ಕೋಟಿ ರೂ. ಟೆಂಡರ್ ಆಗಿದೆ.
ಹಾಲಿ ಕೊರೋನಾ ವೈರಸ್ ನಿಯಂತ್ರಣದ ದೃಷ್ಟಿಯಿಂದ ಎಲ್ಲ ಸರಕಾರಿ ಹಾಗೂ ಖಾಸಗಿ ಸಂಸ್ಥೆ, ಕೆಲಸಗಾರರಿಗೆ ರಜೆ ನೀಡಲಾಗಿದೆ. ಸಮುದಾಯ ಸೇರುವ ಹಾಗೂ ವಾಹನಗಳ ಸಂಚಾರ ಇರುವ ರಸ್ತೆಯಾಗಿರುವುದರಿಂದ ರಸ್ತೆ ಅಭಿವೃದ್ಧಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ ಮಾ. 30ರ ತನಕ ಕಾಮಗಾರಿಯನ್ನು ಸ್ಥಗಿತ ಗೊಳಿಸ ಲಾಗಿದೆ. ಸರಕಾರದ ಆದೇಶ ನೋಡಿ ಕೊಂಡು ಕಾಮಗಾರಿಯನ್ನು ಮುಂದು ವರಿಸುವ ಚಿಂತನೆ ನಡೆಸ ಲಾಗುವುದು ಎಂದು ರಾ.ಹೆ. ಹೆದ್ದಾರಿ ಸಹಾಯಕ ಎಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ. ಎ. 15: ಮುಕ್ತಾಯದ ಗುರಿ
ಮಾಣಿಯಿಂದ ಸಂಪ್ಯ ತನಕದ ಸುಮಾರು 18 ಕಿ.ಮೀ. ಹಾಗೂ ಜಾಲೂÕರಿನಿಂದ 15 ಕಿ.ಮೀ. ಡಾಮರು ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಇನ್ನು 22 ಕಿ.ಮೀ. ಹಾಗೂ 16.6 ಕಿ.ಮೀ. ಸೇರಿ ಒಟ್ಟು ಸುಮಾರು 37.6 ಕಿ.ಮೀ. ಮರು ಡಾಮರು ಕಾಮಗಾರಿ ಬಾಕಿ ಇದೆ. ಒಂದೆರಡು ದಿನಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದ ಕಾರಣಕ್ಕೆ ಕಾಮಗಾರಿ ವೇಗವನ್ನೂ ಪಡೆದುಕೊಂಡಿತ್ತು. ಎ. 15ಕ್ಕೆ ಕಾಮಗಾರಿಯನ್ನು ಪೂರ್ತಿಗೊಳಿಸುವ ಗುರಿ ಇರಿಸಲಾಗಿತ್ತು.