Advertisement

ಸುಳ್ಯ ನಗರದಲ್ಲಿ ಮ್ಯಾನ್‌ಹೋಲ್‌ ದುರಸ್ಥಿ  ಕಾರ್ಯ

03:45 AM Jul 02, 2017 | |

ಸುಳ್ಯ :  ಸುಳ್ಯ ನಗರದಲ್ಲಿ  ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ್ಗೆ  ಬ್ಲಾಕ್‌ ಆಗುತ್ತಿರುವ ಒಳಚರಂಡಿ ದುರಸ್ತಿ ಕಾರ್ಯಕ್ಕಾಗಿ ಮುಖ್ಯರಸ್ತೆಯ ಡಾಮರಿನಡಿ ಮುಚ್ಚಿಹೋಗಿರುವ ಮ್ಯಾನ್‌ಹೋಲ್‌ಗ‌ಳನ್ನು ತೆರೆಯುವ ಕಾರ್ಯ ನಡೆಯುತ್ತಿದೆ.

Advertisement

ಶನಿವಾರ ನಗರದ ಮುಖ್ಯ ರಸ್ತೆಯಲ್ಲಿರುವ ಮ್ಯಾನ್‌ ಹೋಲ್‌ಗ‌ಳನ್ನು  ತೆರೆಯುವ ಕಾರ್ಯ  ನಗರ ಪಂಚಾಯತ್‌ ಕೈಗೊಂಡಿದೆ. ಒಟ್ಟು 9 ಮ್ಯಾನ್‌ಹೋಲ್‌ಗ‌ಳ ಪೈಕಿ ಮುಖ್ಯರಸ್ತೆಯಲ್ಲಿ  5 ಮ್ಯಾನ್‌ಹೋಲ್‌ಗ‌ಳಿವೆ. ಕೆ.ಆರ್‌.ಡಿ.ಸಿ.ಎಲ್‌.ನವರು ಡಾಮರೀಕರಣ ಸಂದರ್ಭ ಈ ಹೋಲ್‌ಗ‌ಳ ಮೇಲೆ ಡಾಮರು ಹಾಕಿರುವುದರಿಂದ ಮುಚ್ಚುಗಡೆಯಾಗಿದೆ. ಆಗಾಗ್ಗೆ  ಬ್ಲಾಕ್‌ ಆಗುವ ಸಂದರ್ಭ ನಾಲ್ಕು ಹೋಲ್‌ಗ‌ಳನ್ನು ಸುಲಭವಾಗಿ ತೆರೆದು ತ್ಯಾಜ್ಯ ಸರಿಪಡಿಸಲಾಗುತ್ತಿತ್ತು.

ಕಳೆದೊಂದು ತಿಂಗಳಿನಿಂದ ಒಳಚರಂಡಿ ಬ್ಲಾಕ್‌ ದುರಸ್ತಿಪಡಿಸಿದ್ದರೂ ಸರಿಯಾಗಿರಲಿಲ್ಲ. ಹೀಗಾಗಿ ನಗರ ಪಂಚಾಯತ್‌ ಡಾಮರೀನಡಿ ಮುಚ್ಚಿಹೋಗಿರುವ ಹೋಲ್‌ಗ‌ಳ ಸಹಿತ ಎಲ್ಲಾ ಹೋಲ್‌ಗ‌ಳನ್ನು ತೆರೆದು ಮಂಗಳೂರಿನಿಂದ ಸಕ್ಕಿಂಗ್‌ ಯಂತ್ರ ತರಿಸಿ ಪೂರ್ತಿ ಸರಿಪಡಿಸಲು ನಿರ್ಧರಿಸಿದ್ದು, ಅದರಂತೆ ಈ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next